ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಕಿತ್ತೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಬಾಬಾಸಾಹೇಬ್ ಪಾಟೀಲಗೆ ಟೆಕೆಟ್ ನೀಡಲಾಗಿದ್ದು, ಇದರಿಂದ ಬೇಸರಗೊಂಡು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಡಿ.ಬಿ ಇನಾಮದಾರ್ (DB Inamdar) ಕುಟುಂಬ ತೀರ್ಮಾನ ಮಾಡಿದೆ.
ಈ ಕುರಿತಾಗಿ ಬೆಳಗಾವಿಯಲ್ಲಿ ಡಿ.ಬಿ ಇನಾಮದಾರ್ ಸೊಸೆ ಲಕ್ಷ್ಮೀ ಇನಾಮದಾರ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, 40 ವರ್ಷಗಳಿಂದ ಡಿ.ಬಿ.ಇನಾಮದಾರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಅವರಿಗೆ ಹುಷಾರಿಲ್ಲ, ಇಂತಹ ಕಷ್ಟದ ಸಮಯದಲ್ಲಿ ಪಕ್ಷ ಕೈಬಿಟ್ಟಿದೆ. ಈಗ ಯಾರು ನಮಗೆ ಕೈಹಿಡಿತಾರೆ ಅಂಥವರು ದೇವರಾಗುತ್ತಾರೆ. ಡಿ.ಬಿ.ಇನಾಮದಾರ್ ಬಿಟ್ಟು ಕುಟುಂಬಸ್ಥರು ರಾಜೀನಾಮೆ ನೀಡುತ್ತಿವೆ. ಸದ್ಯದಲ್ಲೇ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಟಿಕೆಟ್ ಕೈ ತಪ್ಪಿದ್ದು ಬಹಳ ಕೆಟ್ಟ ಅನುಭವ ನೀಡಿದೆ. ಡಿ.ಬಿ ಇನಾಮದಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಲಾಯಲಿಸ್ಟ್ ಆಗಿದ್ದರು ಎಂದು ಹೇಳಿದರು.
ಮೊದಲ ಲಿಸ್ಟ್ನಲ್ಲಿಯೇ ಅವರ ಹೆಸರು ಬರಬೇಕಾಗಿತ್ತು. ಅವರಿಗೆ ಅನಾರೋಗ್ಯದ ಕಾರಣದಿಂದ ಟಿಕೆಟ್ ಮೊದಲ ಲಿಸ್ಟ್ನಲ್ಲಿ ಬರಲಿಲ್ಲ ಅಂದರು. ಡಿ.ಬಿ ಇನಾಮದಾರ್ ಅವರ ಪರಿಸ್ಥಿತಿ ಎಲ್ಲ ನಾಯಕರ ಮುಂದೆಯೂ ಹೇಳಿದ್ದೇವೆ. ಬೆಂಗಳೂರಿಗೆ ಹೋಗಿ ನಮ್ಮನ್ನೂ ಸಹ ಟಿಕೆಟ್ಗೆ ಪರಿಗಣಿಸಿ ಅಂತ ಹೇಳಿದ್ದೇವೆ. ಹೊಸ ಸರ್ವೇ ಮಾಡಿಸಿ ಅದರಲ್ಲಿ ನಮ್ಮ ಹೆಸರು ಬಂದರೆ ಟಿಕೆಟ್ ಕೊಡಿ ಇಲ್ಲವಾದರೆ ಬೇಡ ಎಂದಿದ್ದೇವು. ಅದಕ್ಕೆ ರಾಜ್ಯ ನಾಯಕರು ಸಹ ಸಮ್ಮತಿ ಸೂಚಿಸಿದರು.
ಹೈಕಮಾಂಡ್ನಿಂದ ಪೋನ್ ಬಂತು ನನ್ನ ಕನ್ವಿನ್ಸ್ ಮಾಡಿದರು. ಆಗ ನಾನು ಕಾರ್ಯಕರ್ತರು ಏನು ತೀರ್ಮಾನ ತಗೋತಾರೆ ಅದಕ್ಕೆ ನಾನು ಬದ್ಧವಾಗಿದ್ದೆನೆ . ಏನೇ ನಿರ್ಧಾರ ಮಾಡಿರು ಸಹ ಫ್ಯಾಮಿಲಿ ಕಾರ್ಯಕರ್ತರ ನಿರ್ಧಾರ ಮಾಡುತ್ತಾರೆ. ಕಿತ್ತೂರು ಗ್ರೌಂಡ್ ರಿಯಾಲಿಟಿಯೇ ಬೇರೆ ಇದೆ, ಆದರೆ ಹೈಕಮಾಂಡ್ಗೆ ತೋರಿಸಿದ್ದೆ ಬೇರೆ ಇದೆ. ಕಾರ್ಯಕರ್ತರ ಸಭೆ ಮಾಡಿ ಅಂತಿಮ ನಿರ್ಧಾರ ಘೋಷಣೆ ಮಾಡುತ್ತೇವೆ ಎಂದರು.