HEALTH| ನೀವು ಈ ಸತ್ಯ ತಿಳಿಯಲೇ ಬೇಕು…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾಲು  ಪರಿಪೂರ್ಣ ಆಹಾರ. ನಮ್ಮ ಶರೀರಕ್ಕೆ  ಅಗತ್ಯವಾದ ಬೇಕಾಗಿವ ವಿಟಮಿನ್ ಗಳನ್ನು ಒದಗಿಸುತ್ತದೆ.  ಆಹಾರದಲ್ಲಿ ಸಕ್ಕರೆಯಂತೆ ಬೆಲ್ಲಕ್ಕೂ ಪ್ರಾಮುಖ್ಯತೆಯಿದೆ.  ಬೆಲ್ಲದಲ್ಲಿ ಅನೇಕ ಅಂಶಗಳಿವೆ. ಬಿಸಿ ಬಿಸಿ ಹಾಲಿಗೆ ಸ್ವಲ್ಪ ಬೆಲ್ಲ ಸೇರಿಸಿ ಕುಡಿದರೆ ನಾಲಗೆಗೂ ರುಚಿ ದೇಹಕ್ಕೂ ಹಿತಕರ. ಹೀಗೆ ಮಾಡುವುದರಿಂದ ಹಲವು ಅನಾರೋಗ್ಯ  ದೂರವಾಗುವುದು.

ಬಿಸಿ ಹಾಲಿಗೆ ಬೆಲ್ಲ ಹಾಕಿ ಸೇವನೆ ಮಾಡುವುದರಿಂದ ಸ್ಥೂಲಕಾಯ ನಿವಾರಣೆಯಾಗುತ್ತದೆ. ಬೆಲ್ಲದಲ್ಲಿರುವ ಔಷಧೀಯ ಗುಣಗಳು ದೇಹದ ಕೊಬ್ಬನ್ನು ಕರಗಿಸಿ, ತೂಕವನ್ನು ಕಡಿಮೆ ಮಾಡುತ್ತದೆ.ನಿತ್ಯವೂ ಹೀಗೆ ಸೇವನೆ ಮಾಡುವುದರಿಂದ ಶರೀರದ ತೂಕವನ್ನು ಸಮತೋಲನದಲ್ಲಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಹಲವರಲ್ಲಿ ರಕ್ತಹೀನತೆ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಬೆಲ್ಲ ಬೇರೆಸಿದ ಹಾಲು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆ ಕಡಿಮೆಯಾಗಿ, ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯುತ್ತದೆ.

ತಲೆ ಕೂದಲು ಹೊಳಪಾಗುತ್ತದೆ. ತಲೆಹೊಟ್ಟು ನಿವಾರಣೆಯಾಗಿ, ಕೂದಲು ಉದುರುವುದ ಕಡಿಮೆಯಾಗುತ್ತದೆ.

ಮಹಿಳೆಯರಲ್ಲಿ ಋತುಚಕ್ರದಲ್ಲಿ ಪೀಡಿಸುವ ಹೊಟ್ಟೆನೋವು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಬೆಲ್ಲ ಬೆರಸಿದ ಹಾಲಿನಲ್ಲಿ ಪ್ರಾಕೃತಿಕವಾದ ಆಂಟಿಬಯಾಟಿಕ್‌, ಆಂಟಿವೈರಲ್‌ ಗುಣವಿರುತ್ತದೆ.ಹೀಗಾಗಿ ರೋಗ ನೀರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜತೆಗೆ ವೈರಸ್‌ಸೋಂಕುಗಳು ನಿವಾರಣೆಯಾಗುತ್ತದೆ.

ವೃದ್ಧಾಪ್ಯದಲ್ಲಿ ಬಹಳಷ್ಟು ಮಂದಿಕೀಲು ನೋವುಗಳ ಸಮಸಸ್ಯೆಗೆ ಸಾಮಾನ್ಯ. ಅಂತಹವರು ಪ್ರತಿದಿನ ಬಿಸಿ ಹಾಲಿಗೆ ಬೆಲ್ಲ ಸೇರಿಸಿದರೆ ನೋವಿನಿಂದ ಉಪಶಮನ ಲಭಿಸುತ್ತದೆ. ಮತ್ತು ಕೀಲುಗಳು ಗಟ್ಟಿಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!