ಮನೆಗೆ ಹಾವು ಬಂದ್ರೆ… ಕೂಡಲೇ ಈ ನಂಬರ್​ಗೆ ಕಾಲ್ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬೆಂಗಳೂರಿನ ನಾಗರಿಕರೇ ಗಮನಿಸಿ, ನಿಮಗೊಂದು ಮಹತ್ವದ ಮಾಹಿತಿಯೊಂದು ಇಲ್ಲಿದೆ. ಬೇಸಿಗೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ, ಅವುಗಳಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೊಂದಕ್ಕೆ ಹೇಗೆ ಪರಿಹಾರ ಪಡೆಯುವುದು ಎಂದು ನಾವು ನಿಮಗೆ ತಿಳಿಸಿಕೊಡ್ತೀವಿ ನೋಡಿ.

ಬೆಂಗಳೂರಿನಲ್ಲಿ ಬಿಸಿಲ ಝಳ ಹೆಚ್ಚಿದೆ. ಬಿಸಿಲಿನ ಕಾವಿಗೆ ಹಾವುಗಳು ತಂಪು ಪ್ರದೇಶ ಹುಡುಕಿಕೊಂಡು ಬರುತ್ತಿರುತ್ತವೆ. ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಹಾವುಗಳು ಮನೆಯೊಳಗೆ ಬಂದ ಉದಾಹರಣೆಗಳು ವರದಿಯಾಗುತ್ತಿವೆ. ಆದರೆ ಹೀಗೆ ಮನೆಯೊಳಗೆ ಪ್ರವೇಶಿಸಿದ ಹಾವುಗಳನ್ನು ಹೊಡೆಯಬೇಡಿ, ಅವುಗಳನ್ನು ಕೊಲ್ಲಬೇಡಿ. ಅದರ ಬದಲು ನೀವು ಮಾಡಬೇಕಾದ ದಾರಿಯೊಂದು ಇಲ್ಲಿದೆ.

ನಿಮ್ಮ ಮನೆಯೊಳಗೆ ಹಾವು ಪ್ರವೇಶಿಸಿದರೆ, ಯಾವುದೇ ಕಾರಣಕ್ಕೂ ಹಾವುಗಳಿಗೆ ಹಾನಿ ಮಾಡಬೇಡಿ ಎಂದು ಉರಗ ತಜ್ಞರು ಮನವಿ ಮಾಡಿದ್ದಾರೆ. ಅಲ್ಲದೇ ಈ ಸಂಪರ್ಕ ಸಂಖ್ಯೆಯೊಂದಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.

ನಿಮ್ಮ ಕಣ್ಣಿಗೆ ಎಲ್ಲೇ ಹಾವು ಕಂಡರೂ ತಕ್ಷಣ ಪಾಲಿಕೆ ಸಹಾಯವಾಣಿ ಸಂಖ್ಯೆಗೆ ಕಾಲ್ ಮಾಡಿ ಮಾಹಿತಿ ನೀಡಬಹುದಾಗಿದೆ. ಬಿಬಿಎಂಪಿ ವನ್ಯಜೀವಿ ಸಹಾಯವಾಣಿ ಸಂಖ್ಯೆ 9902794711 ಅಥವಾ 8105270233 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.

ಒಟ್ಟಾರೆ ಬೆಂಗಳೂರು ನಗರದ ನಿವಾಸಿ ನೀವಾಗಿದ್ದರೆ ಈ ಫೋನ್ ನಂಬರ್ ಸೇವ್ ಮಾಡಿಕೊಳ್ಳಿ. ಯಾವಾಗಾದ್ರೂ ನಿಮಗೆ ಹಾವು ಕಾಣಿಸಿದರೆ ಗಾಬರಿಯಾಗದೇ ಈ ಕಾಂಟಾಕ್ಟ್ ನಂಬರ್​ಗೆ ಮಾಹಿತಿ ನೀಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!