ಹೊಸದಿಗಂತ ಡಿಜಿಟಲ್ ಡೆಸ್ಕ್ :
ಹರಿಯಾಣದ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ (Bhupinder Singh Hooda) ಅವರು ಪ್ರಯಾಣಿಸುತ್ತಿದ್ದ ಟೊಯೊಟಾ ಲ್ಯಾಂಡ್ ಕ್ರೂಸರ್ ಭಾನುವಾರಅಪಘಾತಕ್ಕೀಡಾಗಿದೆ.
ಅದೃಷ್ಟವಶಾತ್ ಹೂಡಾ ಯಾವುದೇ ಹಾನಿಗೊಳಗಾಗದೇ ಪಾರಾಗಿದ್ದಾರೆ. ವಾಹನದಲ್ಲಿದ್ದ ಇತರ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ಹೂಡಾ ಅವರು ಬಾಕ್ಸರ್ ಸವೀತಿ ಬೂರಾ ಅವರನ್ನು ಗೌರವಿಸಲು ಹಿಸ್ಸಾರ್ನ ಗಿರಾಯೆ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ವಾಹನವು ನೀಲಗಾಯ್ಗೆ (Nilgai) ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗದ ಎರಡು ಏರ್ ಬ್ಯಾಗ್ಗಳು (Air bags) ತೆರೆದುಕೊಂಡು ಅನಾಹುತದ ತೀವ್ರತೆ ಕಡಿಮೆಗೊಳಿಸಿದೆ.
ಹೂಡಾ ಅವರು ಚೆನ್ನಾಗಿದ್ದಾರೆ ಮತ್ತು ನಿಗದಿತ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು. ವಾಹನಕ್ಕೆ ಹಾನಿಯಾಗಿದೆ ಆದರೆ ಅದರಲ್ಲಿದ್ದವರು ಕ್ಷೇಮವಾಗಿದ್ದಾರೆ. ಅವರು ಪ್ರಸ್ತುತ ತಮ್ಮ ಆಪ್ತ ಸಹಾಯಕರೊಬ್ಬರ ವಿವಾಹ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರ ಮಾಧ್ಯಮ ಸಲಹೆಗಾರ ಸುನಿಲ್ ಪಾರ್ಟಿ ತಿಳಿಸಿದ್ದಾರೆ