50 ವರ್ಷದಲ್ಲಿ ಹುಲಿಗಳ ಸಂಖ್ಯೆ ಶೇ. 75 ರಷ್ಟು ಹೆಚ್ಚಳ: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹುಲಿ ಸಂರಕ್ಷಣಾ ಯೋಜನೆಯ 50ನೇ ವರ್ಷದ ಸುವರ್ಣ ಸಂಭ್ರಮೋತ್ಸವ ಹಿನ್ನೆಲೆ ಮೈಸೂರಿನ (Mysuru) ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಈ ವೇಳೆ ಹುಲಿ ಗಣತಿ ವರದಿಯನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ.

ಬೆಳಗ್ಗೆ 10. 30ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಪ್ರಧಾನಿ ಮೋದಿ ಉಪಸ್ಥಿತಿ ಇದ್ದವರಿಗೆ ಕ್ಷಮೆ ಕೋರಿದ್ದಾರೆ. ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಹುಲಿ ವರದಿಯನ್ನು ಮೋದಿ ಬಿಡುಗಡೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ಹುಲಿ ಯೋಜನೆಗೆ 50 ವರ್ಷಗಳು ಪೂರ್ಣಗೊಂಡಿದ್ದು, ಇದರ ಯಶಸ್ಸು ಕೇವಲ ಭಾರತಕಕ್ಕಲ್ಲ, ಇಡೀ ಜಗತ್ತಿಗೆ ಅಗತ್ಯವಿದೆ. ಹುಲಿ ಜನ್ಮ ತಾಳಲು ಜೀವಿಸಲು ಅಗತ್ಯ ವಾತಾವರಣ ಭಾರತದಲ್ಲಿದ್ದು, ಇದನ್ನು ರೂಪಿಸಿರುವ ಹೆಮ್ಮೆ ಇದೆ. ಹುಲಿ ಜನಸಂಖ್ಯೆಯಲ್ಲಿ ಶೇಕಡ 75 ರಷ್ಟು ಭಾರತದಲ್ಲಿ ಇದೆ. ಕಳೆದ 50 ವರ್ಷದಲ್ಲಿ ಹುಲಿಗಳ ಸಂಖ್ಯೆ ಶೇ. 75 ರಷ್ಟು ಹೆಚ್ಚಾಗಿದೆ ಎಂದು ಮೋದಿ ಹೇಳಿದರು.

ಇಲ್ಲಿ ಹುಲಿಗಳು ಮಾತ್ರವಲ್ಲದೆ ಘೇಂಡಾಮೃಗ, ಆನೆಗಳ ವಿಷಯದಲ್ಲೂ ದಾಖಲೆ ಬರೆಯುತ್ತಿದ್ದೇವೆ. 4 ವರ್ಷಗಳಲ್ಲಿ ಚಿರತೆಗಳ ಸಂಖ್ಯೆಯೂ ಬಹಳಷ್ಟು ಹೆಚ್ಚಿದೆ. ಈ ಎಲ್ಲ ದಾಖಲೆಗಳು ಸಾರ್ವಜನಿಕರ ಸಹಭಾಗಿತ್ವದಿಂದ ಸಾಧ್ಯವಾಗಿದೆ ಎಂದರು.

ವಿಶ್ವದ ಭೂ ಪ್ರದೇಶದ ಕೇವಲ ಶೇ.2.4 ರಷ್ಟು ಭೂಮಿಯನ್ನು ಹೊಂದಿರುವ ಭಾರತವು ಜಾಗತಿಕ ವೈವಿಧ್ಯತೆಗೆ ಶೇ.8 ರಷ್ಟು ಕೊಡುಗೆ ನೀಡುತ್ತದೆ. ದಶಕಗಳ ಹಿಂದೆಯೇ ಭಾರತದಲ್ಲಿ ಚಿತಾಗಳು ಅಳಿದು ಹೋಗಿದ್ದವು. ನಾವು ಈಗ ಚೀತಾವನ್ನು ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತಂದಿದ್ದೇವೆ . ದಶಕಗಳ ನಂತರ ಭಾರತದಲ್ಲೂ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಮಂಗೋಲಿಯ, ತಾಂಜಾನಿಯಾ, ಇಥಿಯೋಪಿಯ, ನೇಪಾಳ, ಭೂತಾನ್, ನೈಜೀರಿಯಾ, ಕೀನ್ಯಾ, ಬಾಂಗ್ಲಾದೇಶ, ವಿಯೆಟ್ನಾಂ, ಅಮೇರಿಕಾ ಹಾಗೂ ಭಾರತದ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಹಾಗೂ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ 1200 ಜನರು ಭಾಗಿಯಾಗಿದ್ದು, ಕಾರ್ಯಕ್ರಮಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.

4 ವರ್ಷದಲ್ಲಿ 200 ಹುಲಿಗಳ ಸಂಖ್ಯೆ ಹೆಚ್ಚಳವಾಗಿದ್ದು, 2022 ರ ಹೊತ್ತಿಗೆ, ಭಾರತವು 3,167 ಹುಲಿಗಳನ್ನು ಹೊಂದಿದೆ. ಇದು 2018 ರಲ್ಲಿ 2,967 ರಿಂದ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. 2018 ರಿಂದ 4 ವರ್ಷಗಳ ಕಾಲ ನಡೆದ ಹುಲಿ ಗಣತಿಯ ವರದಿಯನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!