ಮದುವೆ ಮನೆಯಲ್ಲಿ ಗುಂಡು ಹಾರಿಸಿದ ವಧು: ಪ್ರಕರಣ ದಾಖಲಾಗುತ್ತಿದ್ದಂತೆ ನವವಿವಾಹಿತೆ ಪರಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇತ್ತೀಚಿನ ದಿನಗಳಲ್ಲಿ ಮದುವೆ ಮನೆಯಲ್ಲಿ ವಿಭಿನ್ನ ರೀತಿಯ ಮೋಜಿನ ಚಟುವಟಿಕೆಗಳನ್ನುಆಯೋಜಿಸಲಾಗುತ್ತಿದೆ. ಇದೇ ರೀತಿಯಾಗಿ ಮದುವೆ ಸಂಭ್ರಮವೊಂದರಲ್ಲಿ ವೇದಿಕೆಯ ಮೇಲೆ ವಧು ನಾಲ್ಕು ಸುತ್ತಿನ ಗುಂಡು ಹಾರಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಕರಣ ದಾಖಲಾಗಿದ್ದು, ವಧು ನಾಪತ್ತೆಯಾಗಿದ್ದಾಳೆ.

ವೇದಿಕೆಯ ಮೇಲಿದ್ದ ವಧು ವರರ ಲಡೆಗೆ ಬಂದ ವ್ಯಕ್ತಿಯೊಬ್ಬ ವಧುವಿಗೆ ಲೋಡ್‌ ಮಾಡಿದ ರಿವಾಲ್ವರ್‌ ಅನ್ನು ಹಸ್ತಾಂತರಿಸಿದ್ದಾನೆ. ಸಂಭ್ರಮದ ಭಾಗವಾಗಿ ವಧು ನಾಲ್ಕು ಸುತ್ತಿನ ಗುಂಡು ಹಾರಿಸಿದ್ದಾಳೆ. ಈ ವಿಡಿಯೋ ಅನ್ನು ಮದುವೆಗೆ ಬಂದಿದ್ದವರು ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶುಕ್ರವಾರದಂದು ಹತ್ರಾಸ್‌ ಜಂಕ್ಷನ್‌ ಪ್ರದೇಶದ ಸೇಲಂಪುರ ಗ್ರಾಮದ ಅತಿಥಿ ಗೃಹದಲ್ಲಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ವಿಡಿಯೋ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ವಧುವಿನ ಕಟುಂಬಸ್ಥರನ್ನು ವಿಚಾರಣೆ ಮಾಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!