Thursday, June 1, 2023

Latest Posts

VIRAL VIDEO| ಪೇಪರ್‌ನಲ್ಲಿ ಬರೆದಂತೆ ರಿಯಾಕ್ಟ್‌ ಮಾಡಿದ ಚಾಣಾಕ್ಷ ಶ್ವಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶ್ವಾನಗಳು ಓದುವುದೂ ಬರುತ್ತಾ? ನೀವು ಓದಿದ್ದನ್ನು ಅರ್ಥಮಾಡಿಕೊಂಡು ಅದನ್ನು ಹಾಗೆಯೇ ರಿಯಾಕ್ಟ್‌ ಕೂಡಾ ಮಾಡುತ್ತಾ? ಇದು ಅಚ್ಚರಿಯಾದರೂ ಸತ್ಯ. ನಾಯಿಯ ಮಾಲೀಕ ತನ್ನ ಮುದ್ದಿನ ನಾಯಿಗೆ ತಾನು ಬರೆದು ತೋರಿಸಿದ್ದನ್ನು ರಿಯಾಕ್ಟ್‌ ಮಾಡಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ.

ಸಾಕುಪ್ರಾಣಿಗಳಿಗೆ ಅವುಗಳ ಮಾಲೀಕರು ವಿವಿಧ ತಂತ್ರಗಳನ್ನು ಕಲಿಸುತ್ತಾರೆ. ಅವರಿಗೆ ತರಬೇತಿ ನೀಡುವ ಮೂಲಕ, ಅವರು ಹೇಳಿದಂತೆ ಕೇಳುವ ಹಾಗೆ ಮಾಡುತ್ತಾರೆ. ಇತ್ತೀಚೆಗೆ, ನಾಯಿಯೊಂದು ತನ್ನ ಮಾಲೀಕರು ಕಾರ್ಡ್‌ನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ನೋಡಿ ಅದರಂತೆ ನಾಯಿ ಆಕ್ಟ್‌ ಮಾಡಿದೆ. ಒಬ್ಬ ಮಹಿಳೆ ತನ್ನ ಮುದ್ದಿನ ನಾಯಿಗೆ ಕೆಲವು ಕಾರ್ಡ್‌ಗಳನ್ನು ತೋರಿಸುತ್ತಾಳೆ ಮತ್ತು ಕಾರ್ಡ್‌ನಲ್ಲಿ ಬರೆದಂತೆ ಮಾಡಲು ಹೇಳುತ್ತಾಳೆ. ಇದನ್ನು ನೋಡಿದವರೆಲ್ಲ ಮೂಕವಿಸ್ಮಿತರಾದರು. ಆ ಕಾರ್ಡ್‌ನಲ್ಲಿರುವುದನ್ನು ಆ ನಾಯಿ ಹೇಗೆ ಓದಬಲ್ಲದು? ಎಂದು ಎಲ್ಲರೂ ಆಶ್ಚರ್ಯಗೊಂಡರು.

ಈ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ತರಬೇತಿಯನ್ನು ಹೇಗೆ ನೀಡಲಾಗಿದೆ ಎಂದು ಕೆಲವರು ಅರ್ಥಮಾಡಿಕೊಳ್ಳುತ್ತಾರೆ. ನೀವು ಒಳ್ಳೆ ಟೀಚರ್.. ನಾಯಿಗಳು ನಿಜಕ್ಕೂ ಜಾಣ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಏನೇ ಆಗಲಿ ಮೂಕ ಜೀವಿಗಳಿಗೆ ಅರ್ಥ ಮಾಡಿ ಅಭ್ಯಾಸ ಕಲಿಸುವುದು ಸಾಮಾನ್ಯ ಸಂಗತಿಯಲ್ಲ.

https://www.instagram.com/reel/CpndcptJ5WY/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!