ಹೊಸದಿಗಂತ ಡಿಜಿಟಲ್ ಡೆಸ್ಕ್ :
ಕೋಟ್ಯಂತರ ರೂ. ನೀಡಿ ದುಬಾರಿ ಬೆಲೆಯ ಕಾರುಗಳನ್ನು ಶ್ರೀಮಂತರು ಖರೀದಿಸುವುದನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 123 ಕೋಟಿ ರೂ. ನೀಡಿ ಅಪರೂಪದ ಕಾರ್ ನಂಬರ್ ಪ್ಲೇಟನ್ನು ಖರೀದಿ ಮಾಡಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ದುಬೈನಲ್ಲಿ ಶನಿವಾರದಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಪಿ-7 ಎಂಬ ನಂಬರ್ಪ್ಲೇಟ್ 123 ಕೋಟಿ ರೂ.ಗೆ ಮಾರಾಟವಾಗಿದೆ. ಇಷ್ಟೊಂದು ಹಣವನ್ನು ಖರ್ಚು ಮಾಡಿ ಬಿಡ್ ಗೆದ್ದವರು ಯಾರು ಎನ್ನುವುದು ಬಹಿರಂಗವಾಗಿಲ್ಲ.
ಈ ಹರಾಜು ಪ್ರಕ್ರಿಯೆಯಲ್ಲಿ ಸಂಗ್ರಹಿಸಿದ ಹಣವನ್ನು ದುಬೈ ದೊರೆ ಶೇಖ್ ಮೊಹಮ್ಮದ್ ಬಿನ್ ರಶೀದ್ ಅವರ ಜಾಗತಿಕ ಆಹಾರ ನೆರವು ಯೋಜನೆಗೆ ಬಳಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದರು.
2008ರಲ್ಲಿ ಅಬುಧಾಬಿಯಲ್ಲಿ ʼNo.1ʼ ಪ್ಲೇಟ್ ಸುಮಾರು 117 ಕೋಟಿ ರೂ.ಗೆ ಹರಾಜಾಗಿದ್ದು, ಇದುವರೆಗಿನ ದಾಖಲೆಯಾಗಿತ್ತು.