ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
2 ಪಾವು ಅಕ್ಕಿ, 3 ಆಲೂ, 4 ಕ್ಯಾಪ್ಸಿಕಮ್, ಕರಿಬೇವು ಮತ್ತು ರುಚಿಗೆ ಉಪ್ಪು. ಭಾತ್ ಪುಡಿ ತಯಾರಿಸಲು 10 ಒಣಮೆಣಸಿನಕಾಯಿ, 50 ಗ್ರಾಂ ಉದ್ದಿನಬೇಳೆ ಮತ್ತು ಕಡಲೇಬೇಳೆ, 100 ಗ್ರಾಂ ಕೊತ್ತಬಂರಿ ಬೀಜ, ಸ್ವಲ್ಪ ಚಕ್ಕೆ ಹಾಗೂ ಮೊಗ್ಗು, 10 ಗ್ರಾಂ ಮೆಂತ್ಯೆ – ಜೀರಿಗೆ, 3 ಚಮಚ ಎಣ್ಣೆ.
ತಯಾರಿಸುವ ವಿಧಾನ:
ಅಕ್ಕಿಯನ್ನು ತೊಳೆದು ಉದುರಾಗಿ ಅನ್ನ ಮಾಡಿಟ್ಟುಕೊಳ್ಳಬೇಕು. ಮಸಾಲೆ ಪದಾರ್ಥಗಳನ್ನು ಎಣ್ಣೆ ಹಾಕಿ ಹದವಾಗಿ ಹುರುದಿಟ್ಟುಕೊಂಡು, ಮಿಕ್ಸಿಯಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಅರ್ಧ ಬಟ್ಟಲು ಎಣ್ಣೆ ಹಾಕಿ ಆಲೂ ಹಾಗೂ ಕ್ಯಾಪ್ಸಿಕಮ್ ಹೋಳುಗಳನ್ನು ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿರಿ. ಇದಕ್ಕೆ ಭಾತ್ ಪುಡಿಯನ್ನು ಹಾಕಿ ಚೆನ್ನಾಗಿ ಕಲಸಿರಿ. ಅನ್ನವನ್ನು ಒಂದು ಪಾತ್ರೆಗೆ ಹಾಕಿ. ತಯರಿಸಿಟ್ಟುಕೊಂಡ ಆಲೂ ಕ್ಯಾಪ್ಸಿಕಮ್ ಮಸಾಲೆ ಮಿಶ್ರಣವನ್ನ ಅನ್ನಕೆ ಹಾಕಿ ಕಲಸಿ. ಆಲೂ-ಕ್ಯಾಪ್ಸಿಕಮ್ ಭಾತ್ ರೆಡಿ ಟು ಈಟ್.