ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೀಸ್ ಕಟ್ಟದ ಮಕ್ಕಳನ್ನು ತರಗತಿಯಲ್ಲಿ ನಿಲ್ಲಿಸಿ ಫೀಸ್ ಕಟ್ಟೋಕೆ ಹೇಳು ಎನ್ನೋದು, ಶಾಲೆಯಿಂದ ಹೊರಗೆ ಹಾಕೋದು, ದುಡ್ಡಿನ ಜತೆ ಬಾ ಅನ್ನೋದನ್ನು ಸಿನಿಮಾಗಳಲ್ಲಿ ನೋಡಿದ್ದೀರಿ. ಆದರೆ ಇದೇ ರೀತಿ ಪ್ರಕರಣವೊಂದು ಮುಂಬೈನ ಶಾಲೆಯಲ್ಲಿ ನಡೆದಿದೆ.
ಶಾಲೆಯ ಫೀಸ್ ಕಟ್ಟದ ಏಳನೇ ತರಗತಿ ವಿದ್ಯಾರ್ಥಿನಿಯನ್ನು ತರಗತಿಯಿಂದ ಎಬ್ಬಿಸಿ ಹೊರಕ್ಕೆ ಕಳಿಸಿ, ಕಾರಿಡಾರ್ನಲ್ಲಿ ಕುಳಿತು ಪಾಠ ಕೇಳುವಂತೆ ಮಾಡಲಾಗಿದೆ. ಬೇರೆ ಸ್ನೇಹಿತರ ಮಾತುಗಳಿಂದ ಮನನೊಂದು ಹಾಗೂ ಕಾರಿಡಾರ್ನಲ್ಲಿ ಕುಳಿತು ಪಾಠ ಕೇಳಲು ನಾಚಿಕೆಯಾದ ವಿದ್ಯಾರ್ಥಿನಿ ತನ್ನ ತಾಯಿ ಬಳಿ ಬಂದು ನಡೆದಿದ್ದನ್ನು ಹೇಳಿದ್ದಾರೆ.
ತಾಯಿ ಮುಂಬೈನ ಪ್ರಮುಖ ಖಾಸಗಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಇಬ್ಬರು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಮಾನಸಿಕವಾಗಿ ನೊಂದಿದ್ದೇವೆ ಎಂದು ಹೇಳಿದ್ದಾರೆ. ನಾಲ್ಕು ತಿಂಗಳಿನಿಂದ ಕಾರಿಡಾರ್ ಮೇಲೆ ಕೂರಿಸಿ ಮಗು ಪಾಠಕೇಳುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.