ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಸೂಚ್ಯಂಕಗಳು ಗುರುವಾರ ಕೆಳಮಟ್ಟದಲ್ಲಿ ತೆರೆದಿವೆ. ಎನ್ಎಸ್ಇ ನಿಫ್ಟಿ 50ಯು 35.10 ಅಂಕಗಳು ಅಥವಾ 0.20 ಶೇಕಡಾ ಕುಸಿದು 17,777.30 ಅಂಕಗಳಿಗೆ ತಲುಪಿದೆ. ಬಿಎಸ್ಇ ಸೆನ್ಸೆಕ್ಸ್ 114.2 ಅಂಕಗಳು ಅಥವಾ 0.19 ಶೇಕಡಾ ಕುಸಿದು 60,278.57 ಅಂಕಗಳಿಗೆ ತಲುಪಿದೆ ಮತ್ತು ಬ್ಯಾಂಕ್ ನಿಫ್ಟಿ 36.75 ಪಾಯಿಂಟ್ಗಳು ಅಥವಾ 0.09 ಶೇಕಡಾ ಇಳಿದು 42,521 ಕ್ಕೆ ತಲುಪಿದೆ.
ನಿಫ್ಟಿ 50 ಯಲ್ಲಿ ಅಪೋಲೋ ಹಾಸ್ಪಿಟಲ್, ಬ್ರಿಟಾನಿಯಾ, ಎಚ್ಡಿಎಫ್ಸಿ ಲೈಫ್, ಒಎನ್ಜಿಸಿ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಟಾಪ್ ಗೇನರ್ ಆಗಿದ್ದರೆ, ಇಂಡಸ್ಇಂಡ್ ಬ್ಯಾಂಕ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್ಸಿಎಲ್ ಟೆಕ್ ಮತ್ತು ಟಿಸಿಎಸ್ ಟಾಪ್ ಲೂಸರ್ಗಳಾಗಿವೆ.