ಹೊಸದಿಗಂತ ಡಿಜಿಟಲ್ ಡೆಸ್ಕ್ :
ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿರಿಯ ನಟಿ, ರಂಗಭೂಮಿ ಕಲಾವಿದೆ ಉತ್ತರಾ ಬಾಕರ್ (79) ಮೃತರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪುಣೆಯಲ್ಲಿ ಮಂಗಳವಾರ ( ಏ.11 ರಂದು) ನಿಧನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ತರಬೇತಿ ಪಡೆದು ಹಲವರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮುಖ್ಯವಾಗಿ ʼಮುಖ್ಯಮಂತ್ರಿʼ ನಾಟಕದಲ್ಲಿ ʼಪದ್ಮಾವತಿʼ ಯ ಪಾತ್ರ, ʼಮೇನ ಗುರ್ಜರಿʼಯಲ್ಲಿ ʼಮೇನʼ ಎನ್ನುವ ಪಾತ್ರ, ನಾಟಕಕಾರ ಗಿರೀಶ್ ಕಾರ್ನಾಡ್ ಅವರ ʼತುಘಲಕ್ʼನಲ್ಲಿ ತಾಯಿಯ ಪಾತ್ರವನ್ನು ಮಾಡಿ ಜನಮನ್ನಣೆ ಪಡೆದಿದ್ದರು.
ಸಿನಿಮಾ ಕ್ಷೇತ್ರದಲ್ಲಿ ಗೋವಿಂದ್ ನಿಹ್ಲಾನಿಯವರ ʼತಮಸ್ʼ ಚಿತ್ರದಲ್ಲಿನ ಪಾತ್ರ ಹಾಗೂ ಅವರು ಸುಮಿತ್ರಾ ಭಾವೆ ಅವರ ಚಲನಚಿತ್ರಗಳಲ್ಲಿ ಅವರು ನಟಿಸಿ, ಅಂದಿನ ಕಾಲದಲ್ಲಿ ಪ್ರೇಕ್ಷಕರ ಮನ ಗೆದಿದ್ದರು. ʼಉತ್ತರಾಯಣʼ, ʼ ಆಜಾ ನಾಚ್ಲೆʼ ಮಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಮೃಣಾಲ್ ಸೇನ್ ಅವರ ಚಲನಚಿತ್ರ ʼಏಕ್ ದಿನ್ ಅಚಾನಕ್” ಚಿತ್ರದಲ್ಲಿನ ಅವರ ಪಾತ್ರಕ್ಕೆ ನ್ಯಾಷನಲ್ ಆವಾರ್ಡ್ ಕೂಡ ಲಭಿಸಿತ್ತು.