ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಪ್ರಚಾರಕ್ಕೆಂದು ಆಗಮಿಸಿದ್ದಾರೆ.
ಪಕ್ಷದ ಚುನಾವಣಾ ಪ್ರಮುಖರೊಂದಿಗೆ ತಡರಾತ್ರಿ ಸುದೀರ್ಘ ಸಭೆ ನಡೆಸಿದ್ದು, ಪ್ರಚಾರದ ತಂತ್ರಗಳ ಬಗ್ಗೆ ಮಾತನಾಡಿದ್ದಾರೆ. ಗೆಲ್ಲುವ ಸಂಪೂರ್ಣ ವಿಶ್ವಾಸವಿರುವ ಕ್ಷೇತ್ರಗಳಿಗಿಂತ ಸಮಬಲದ ಹೋರಾಟವಿರುವ ಕ್ಷೇತ್ರಗಳ ಮೇಲೆ ಹೆಚ್ಚಿನ ಗಮನ ನೀಡಿ ಎಂದು ಸೂಚನೆ ನೀಡಿದ್ದಾರೆ.
ಯಾವ ಭಾಗದಲ್ಲಿ ಪಕ್ಷಕ್ಕೆ ಅನುಕೂಲವಿದೆ, ಯಾವ ಭಾಗ ಬಿಜೆಪಿ ಭದ್ರಕೋಟೆ ಅಲ್ಲ ಈ ಎಲ್ಲ ವಾತಾವರಣದ ಬಗ್ಗೆ ಮಾಹಿತಿ ಪಡೆದ ಶಾ ಪ್ರಚಾರದ ವಿವಿಧ ತಂತ್ರಗಳನ್ನು ತಿಳಿಸಿದ್ದಾರೆ.
ಗೆಲ್ಲುವುದಕ್ಕೆ ಶೇ.50 ರಷ್ಟು ಅವಕಾಶ ಅಷ್ಟೇ ಇದೆ ಎನ್ನುವ ಕ್ಷೇತ್ರಗಳಲ್ಲಿ ಪ್ರಚಾರ ಹೆಚ್ಚು ಮಾಡಬೇಕು, ಅಂಥ ಕ್ಷೇತ್ರಗಳಲ್ಲಿ ಪ್ರಧಾನಿ ಮೋದಿ ಪ್ರಚಾರ ಕಾರ್ಯಕ್ರಮ ಆಯೋಜಿಸಬೇಕು ಎಂದಿದ್ದಾರೆ.