HEALTHY DRINK| ಆರೋಗ್ಯಕ್ಕೂ ಬೆಸ್ಟ್‌ಈ ರಸರಂಜಿನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಸರಂಜಿನಿ ಈ ವೆದರ್‌ಗೆ ಹೇಳಿ ಮಾಡಿಸಿರುವಂತದ್ದು!. ಬಿಸಿಲ ಬೇಗೆಗೆ ಕಂಗೆಟ್ಟ ಜನತೆ ರಸರಂಜಿನಿಯನ್ನು ಖಂಡಿತಾ ಇಷ್ಟಪಡ್ತಾರೆ. ಹಾಗಾದ್ರೆ ರಸ ರಂಜಿನಿ ಮಾಡೋದು ಹೇಗೆ ನೋಡೋಣ್ವೇ?

ಬೇಕಾಗುವ ಸಾಮಾಗ್ರಿ:

4ದೊಡ್ಡ ಗಾತ್ರದ ಲಿಂಬೆಹಣ್ಣು, ಒಂದು ಹಸಿ ಶುಂಠಿಯ ತುಂಡು, ರಂಗಿನ ಹುಡಿ, ಎರಡು ಕಪ್‌ ಸಕ್ಕರೆ, ಚಿಟಿಕಿ ಉಪ್ಪು, ಚಿಟಿಕಿ ಏಲಕ್ಕಿ ಪುಡಿ

ಮಾಡುವ ವಿಧಾನ:

ಶುಂಠಿಯನ್ನು ಜಜ್ಜಿ ರಸ ಸೋಸಿಟ್ಟುಕೊಳ್ಳಿ. ನಿಂಬೆ ಹಣ್ಣಿನ ರಸವನ್ನು ಪ್ರತ್ಯೇಕವಾಗಿ ತೆಗೆದಿಟ್ಟುಕೊಳ್ಳಿ. ಲಿಂಬೆ ಬೀಜಗಳು ಬರದಂತೆ ಸೋಸಿಕೊಳ್ಳಿ. ಕಾದಾರಿದ ನೀರಿಗೆ ಸಕ್ಕರೆಯನ್ನು ಬೆರೆಸಿ ಸರಿಯಾಗ್ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ನಿಂಬೆ ರಸ, ಶುಂಠಿ ರಸ, ರಂಗಿನ ಹುಡಿ ಚಿಟಿಕೆ ಉಪ್ಪು, ಏಲಕ್ಕಿ ಹುಡಿ ಸೇರಿಸಿ ಕದಡಿಕೊಳ್ಳಿ. ಗಾಜಿನ ಲೋಟಕ್ಕೆ ತುಂಬಿಸಿ. ಐಸ್‌ಕ್ಯೂಬ್‌ಇದ್ದರೆ ಸೇರಿಸಕೊಂಡು ಸರ್ವ್‌ಮಾಡಿ. ಕೂಲ್‌ಕೂಲ್‌ರಸರಂಜಿನಿ ಸಕತ್‌ಮಜಾ ನೀಡುತ್ತೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!