Sunday, June 4, 2023

Latest Posts

ಇಂದಿನಿಂದ ರಾಜ್ಯದಲ್ಲಿ ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲ್ಲೆಡೆ ಅಬ್ಬರದ ಪ್ರಚಾರಗಳು ನಡೆಯುತ್ತಿವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದಿನಿಂದ ಜನವಾಹಿನಿ ಹೆಸರಿನಲ್ಲಿ ಭರ್ಜರಿ ರೋಡ್​ ಶೋ, ಸಮಾವೇಶಗಳನ್ನು ಆರಂಭಿಸಲಿದ್ದಾರೆ.

ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ ಸಿಎಂ ಬೊಮ್ಮಾಯಿ ರೋಡ್​ಶೋ ಕೈಗೊಳ್ಳಲಿದ್ದಾರೆ. ಇಂದು ಒಂದೇ ದಿನ 11 ವಿಧಾಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ. ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದಾರೆ.

ಇಂದು ಬೆಳಗ್ಗೆ 9.45ಕ್ಕೆ ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿನ ಮೂರ್ತಿಗೆ ಮಾಲಾರ್ಪಣೆ, ಬೆಳಿಗ್ಗೆ 11ಕ್ಕೆ ಯಲಹಂಕದಲ್ಲಿ ರೋಡ್​ಶೋ ಮತ್ತು ಸಾರ್ವಜನಿಕ ಸಭೆ, 11.30ಕ್ಕೆ ದೊಡ್ಡಬಳ್ಳಾಪುರ, ಮಧ್ಯಾಹ್ನ 12.30ಕ್ಕೆ ನೆಲಮಂಗಲ, 1.30ಕ್ಕೆ ದಾಬಸ್ ಪೇಟೆ, 2.15ಕ್ಕೆ ಗೂಳೂರು, 3.00 ಗಂಟೆಗೆ ತುಮಕೂರು ನಗರ, 4 ಗಂಟೆಗೆ ಗುಬ್ಬಿ, ಸಂಜೆ 5.00 ಗಂಟೆಗೆ ಕೆ.ಬಿ. ಕ್ರಾಸ್, 6.00 ಗಂಟೆಗೆ ತಿಪಟೂರು, 7.00 ಗಂಟೆಗೆ ಅರಸೀಕೆರೆ, ರಾತ್ರಿ 7.45ಕ್ಕೆ ಬಾಣಾವರ, 8.15ಕ್ಕೆ ಕಡೂರಿನಲ್ಲಿ ರೋಡ್​ ಶೋ ಮತ್ತು ಸಾರ್ವಜನಿಕ ಸಭೆ ನಡೆಸಲಿದ್ದಾರೆ. ರಾತ್ರಿ 9.15ಕ್ಕೆ ಚಿಕ್ಕಮಗಳೂರು ತಲುಪಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.

ನಾಳೆ ಯಲಹಂಕದಲ್ಲಿ ರೋಡ್​ ಶೋ ನಡೆಸುವ ಮೂಲಕ ರಾಜ್ಯ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!