SHOCKING NEWS | ನಮೀಬಿಯಾದಿಂದ ಬಂದ ಮತ್ತೊಂದು ಚೀತಾ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವು ಭಾನುವಾರ ಮತ್ತೆ ಚೀತಾ ಸಾವನ್ನಪ್ಪಿದೆ.

ಉದಯ್ ಎಂಬ ಚಿರತೆ ಸಾವನ್ನಪ್ಪಿದ್ದು, ಈ ಕುರಿತು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಸರ್ಕಾರ ತಂದ ಒಟ್ಟು 20 ಚೀತಾಗಳ ಪೈಕಿ 2 ಚೀತಾ ಸಾವನ್ನಪ್ಪಿವೆ.ಮೃತ ಪಟ್ಟಿರುವ ಚಿರತೆ ‘ಉದಯ್’ಗೆ ಆರು ವರ್ಷ ವಯಸ್ಸಾಗಿತ್ತು. ಇದಕ್ಕೂ ಮುನ್ನ ನಮೀಬಿಯಾದ ಚೀತಾ ಸಶಾ ಮಾರ್ಚ್ 27 ರಂದು ಮೂತ್ರಪಿಂಡದ ಕಾಯಿಲೆಯಿಂದ ಸಾವನ್ನಪ್ಪಿತ್ತು.

ಬೆಳಿಗ್ಗೆ ತಪಾಸಣೆಯ ಸಮಯದಲ್ಲಿ, ದಕ್ಷಿಣ ಆಫ್ರಿಕಾದಿಂದ ತರಲಾದ ಚೀತಾ ತಲೆ ತಗ್ಗಿಸಿ ಮಂಕಾಗಿರುವುದು ಕಂಡುಬಂದಿತು. ನಂತ್ರ ಹಾಜರಾದ ಪಶುವೈದ್ಯರು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣವೇ ಚೀತಾವನ್ನ ದೊಡ್ಡ ಆವರಣದಿಂದ ಹೊರ ತರಲಾಯ್ತು. ದುರದೃಷ್ಟವಶಾತ್ ಸಂಜೆ 4 ಗಂಟೆ ಸುಮಾರಿಗೆ ಚೀತಾ ಮೃತಪಟ್ಟಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (PCCF) ವನ್ಯಜೀವಿ ಜೆ.ಎಸ್.ಚೌಹಾಣ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!