ದಿನ ಭವಿಷ್ಯ : ನಿಮ್ಮ ಅರಿವು ಹೆಚ್ಚಿಸ ಬಲ್ಲ ವ್ಯಕ್ತಿಗಳ ಭೇಟಿ, ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ.

ಮೇಷ
ವೃತ್ತಿ ಕ್ಷೇತ್ರದಲ್ಲಿನ ಕೆಲವು ಬದಲಾವಣೆಗಳು ನಿಮಗೆ ಒಳಿತು ತರಲಿವೆ. ಆರ್ಥಿಕ ಲಾಭ. ಆಪ್ತರ ಜತೆಗಿನ ಸಂಬಂಧ ವೃದ್ಧಿ. ಭಿನ್ನಮತ ನಿವಾರಣೆ.

ವೃಷಭ
ಫಲಪ್ರದ ದಿನ. ಸಾಮಾಜಿಕ ಹಾಗೂ ಇನ್ನಿತರ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಹುಮ್ಮಸ್ಸು.  ಕೌಟುಂಬಿಕ ಪರಿಸ್ಥಿತಿ ಆಹ್ಲಾದಕರ.

ಮಿಥುನ
ಮನೆಯಲ್ಲಿ ಉತ್ತಮ ವಾತಾವರಣ. ಸೌಹಾರ್ದಮಯ. ಇದರಿಂದ ನಿಮ್ಮ ವೃತ್ತಿಯ ಮೇಲೂ ಸಕಾರಾತ್ಮಕ ಪರಿಣಾಮ ಬೀರುವುದು.

ಕಟಕ
ಕಾರ್ಯದಲ್ಲಿ ಸಫಲತೆ. ಇದರಿಂದಾಗಿ ಎಲ್ಲ ಕೆಲಸಗಳು ಸುಲಲಿತವಾಗಿ ಸಾಗುವವು. ಮನೆ ಯಲ್ಲೂ ಹರ್ಷದ ವಾತಾವರಣ.

ಸಿಂಹ
ಕುಟುಂಬ ಸದಸ್ಯರು ಸಲಹೆ ನೀಡಲು ಬಂದರೆ ರೇಗದಿರಿ. ಅವರು ನಿಮ್ಮ ಒಳಿತನ್ನೆ ಬಯಸುತ್ತಾರೆ ಎಂಬು ದನ್ನು ಅರಿಯಿರಿ. ಸಹನೆ ಇರಲಿ.

ಕನ್ಯಾ
ಹೊಸ ಕೆಲಸ ಆರಂಭಿ ಸುವ ಮುನ್ನ ಹಳೆಯ ಕೆಲಸ ಮುಗಿಸಿರಿ. ಕೆಲವರು ನಿಮ್ಮ ಕೆಲಸ ಕೆಡಿಸಲೆಂದೇ ಯತ್ನಿಸುತ್ತಾರೆ. ಅವರನ್ನು ದೂರವಿಡಿ.

ತುಲಾ
ಕೆಲಸದಲ್ಲಿ ಅನಿರೀಕ್ಷಿತ ಅಡ್ಡಿ. ಇದು ನಿಮ್ಮನ್ನು ದಿಗ್ಭ್ರಮೆಗೆ ತಳ್ಳುವುದು. ಕುಟುಂಬಸ್ಥರ ಜತೆ ತಿಳುವಳಿಕೆಯಿಂದ ವರ್ತಿಸಿ, ದುಡುಕಿನಿಂದ ಫಲವಿಲ್ಲ.

ವೃಶ್ಚಿಕ
ಹೆಚ್ಚು ಭಾವುಕ ವರ್ತನೆ. ಇತರರ ಜತೆಗಿನ ಸಂಬಂಧದಲ್ಲಿ ಇದು ನಿಚ್ಚಳವಾಗುವುದು. ಸಂಘರ್ಷದಿಂದ ದೂರವಿರಿ. ಆರ್ಥಿಕ
ಸ್ಥಿತಿ ಸುಧಾರಣೆ.

ಧನು
ಕೆಲಸದಲ್ಲಿ ಕೆಲವು ತಪ್ಪುಗಳು ಘಟಿಸಬಹುದು. ಹಾಗಾಗಿ ಎಚ್ಚರ ವಹಿಸಿ.  ಮನೆಯಲ್ಲಿ ಮಾತಿನಲ್ಲಿ ತಾಳ್ಮೆಯಿರಲಿ, ಅನವಶ್ಯ ವಾಗ್ವಾದ ತಪ್ಪಿಸಿರಿ.

ಮಕರ
ಆರ್ಥಿಕವಾಗಿ ನಿಮಗೆ ಪೂರಕ ದಿನ. ವ್ಯವಹಾರದಲ್ಲಿ ಯಶಸ್ಸು. ಶೇರು ಹೂಡಿಕೆಯಿಂದ ಲಾಭವಾಗಲಿದೆ. ಕೌಟುಂಬಿಕ ನೆಮ್ಮದಿ.

ಕುಂಭ
ನಿಮ್ಮ ಅರಿವು ಹೆಚ್ಚಿಸ ಬಲ್ಲ ವ್ಯಕ್ತಿಗಳ ಭೇಟಿ. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಇತರರ ಸಮ್ಮುಖ
ದಲ್ಲಿ ಕೀಳರಿಮೆ ಇಟ್ಟುಕೊಳ್ಳದಿರಿ.

ಮೀನ
ಕೌಟುಂಬಿಕ ಬೇಡಿಕೆ ಈಡೇರಿಸಲು ಗಮನ ಕೊಡಿ. ಕುಟುಂಬಸ್ಥರಿಗೆ ನಿರಾಶೆ ಉಂಟು ಮಾಡದಿರಿ. ದೂರ ಪ್ರಯಾಣದ ಸಾಧ್ಯತೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!