ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಡಾನ್ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಆಪರೇಷನ್ ಕಾವೇರಿ ಆರಂಭಿಸಿದ್ದು, ಈ ಆಪರೇಷನ್ ಅನ್ವಯ ಈಗಾಗಲೇ 3,400 ಭಾರತೀಯರನ್ನು ಭಾರತಕ್ಕೆ ವಾಪಾಸ್ ಕರೆತರಲಾಗಿದೆ.
ಬಹುತೇಕ ಎಲ್ಲರೂ ಸುರಕ್ಷಿತ ವಲಯದಲ್ಲಿದ್ದಾರೆ. ಸುಡಾನ್ನಲ್ಲಿ ಕೊನೆಯ ತಂಡದ ಭಾರತೀಯರು ಬುಧವಾರದೊಳಗೆ ತಾಯ್ನಾಡಿಗೆ ವಾಪಾಸಾಗುತ್ತಾರೆ. ಸುಡಾನ್ನಲ್ಲಿರು ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಹಗಲಿರುಳು ದುಡಿಯುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಕ್ವಾತ್ರಾ ಹೇಳಿದ್ದಾರೆ.
ಸುಡಾನ್ನಲ್ಲಿ ಉಳಿದಿರುವ ಕಡೆಯ ತಂಡದ ಭಾರತೀಯರು ಬುಧವಾರದ ವೇಳೆ ಭಾರತವನ್ನು ತಲುಪುವ ನಿರೀಕ್ಷೆಯಿದೆ, ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿನ ಭಾರತೀಯರನ್ನು ಕರೆತರಲು ಭಾರತ ತನ್ನ ವಿಮಾನದ ಜತೆ ಸೌದಿ ಏರ್ಲೈನ್ಸ್ ಸಹಾಯವನ್ನೂ ಪಡೆದಿತ್ತು. ಒಂದು ಸಾವಿರದಷ್ಟು ಜನರು ಸುಡಾನ್ನಲ್ಲಿದ್ದು, ನಾಳೆಯೊಳಗೆ ವಾಪಾಸಾಗಲಿದ್ದಾರೆ.