ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಇಂದಿನ ಕಾರ್ಯ ಪರಿಪೂರ್ಣವಾಗಿ ಮುಗಿಯುವುದು. ಯಾವುದೇ ಅಡ್ಡಿ ಬಾಧಿಸದು. ಮನೆ ಯಲ್ಲಿ ಸೌಹಾರ್ದ ವಾತಾವರಣ.
ವೃಷಭ
ಇಂದು ನಿಮ್ಮಲ್ಲಿ ನೆಗೆಟಿವ್ ಚಿಂತನೆಗಳು ಆವರಿಸುತ್ತವೆ. ಅದರಿಂದ ಯಾವುದೇ ಕಾರ್ಯ ಸಾಧಿತ ವಾಗದು. ಕೌಟುಂಬಿಕ ಒತ್ತಡ ಹೆಚ್ಚು.
ಮಿಥುನ
ವಿವಾಹ ಸಂಬಂಧ ಬೆಳೆಸುವ ವಿಚಾರದಲ್ಲಿ ಇಂದು ಸಕಾರಾತ್ಮಕ ಬೆಳವಣಿಗೆ. ಅಡೆತಡೆ ನಿವಾರಣೆ. ಆದಾಯಕ್ಕಿಂತ ಖರ್ಚು ಅಧಿಕವಾಗುವುದು.
ಕಟಕ
ಸಂಬಂಧದಲ್ಲಿ ನೈತಿಕ ನಿಯಮ ಪಾಲಿಸಿ.ಇಲ್ಲವಾದರೆ ಬಂಧುತ್ವ ಹಾಳಾದೀತು. ಯಾರದೋ ಚಿತಾವಣೆಗೆ ಒಳಗಾಗದಿರಿ. ವದಂತಿ ನಂಬಬೇಡಿ.
ಸಿಂಹ
ವೃತ್ತಿಯಲ್ಲಿ ಉನ್ನತಿ. ಹಣದ ವಿಷಯದಲ್ಲಿ ಪೂರಕ ಬೆಳವಣಿಗೆ. ಖರ್ಚು ನಿಯಂತ್ರಿಸಲು ಗಮನ ಕೊಡಿ. ವ್ಯಕ್ತಿಯೊಬ್ಬರಿಂದ ಮಾನಸಿಕ ಕಿರಿಕಿರಿ.
ಕನ್ಯಾ
ಬೆಳಗಿನಿಂದಲೇ ಒತ್ತಡ. ಯಾವುದೇ ಕಾರ್ಯ ಸುಲಲಿತವಾಗಿ ಸಾಗದು. ಕೆಲವು ವ್ಯಕ್ತಿಗಳೂ ನಿಮ್ಮ ನೆಮ್ಮದಿ ಕೆಡಿಸುತ್ತಾರೆ.ಅವರಿಂದ ದೂರ ವಿರುವುದೇ ಲೇಸು.
ತುಲಾ
ಸಹೋದ್ಯೋಗಿಗಳಿಂದ ಸಮಸ್ಯೆ ಸೃಷ್ಟಿ. ಅವರೊಂದಿಗೆ ಹೊಂದಾಣಿಕೆ ಒಳಿತು. ಆವೇಶದ ಪ್ರತಿಕ್ರಿಯೆ ನೆಮ್ಮದಿ ಹಾಳು ಮಾಡಬಹುದು.
ವೃಶ್ಚಿಕ
ಮನಸ್ಸನ್ನು ಕಾಡುವ ಭಾವನೆಗಳನ್ನು ಸಂಬಂಧಿಸಿದವರ ಜತೆ ಹಂಚಿಕೊಳ್ಳಿ. ಅದಕ್ಕೆ ಹಿಂಜರಿಕೆ ಬೇಡ. ಸೂಕ್ತ ಪ್ರತಿಸ್ಪಂದನೆ ನಿಮಗೆ ಸಿಗುವುದು.
ಧನು
ಎಂತಹ ಪ್ರತಿಕೂಲ ಪರಿಸ್ಥಿತಿಯನ್ನೂ ನಿಭಾಯಿಸುವ ಮನಸ್ಥಿತಿ ಇಂದು ನಿಮ್ಮದು. ಅದರಿಂದ ಕಾರ್ಯಗಳು ಸಾಧಿತ. ಸಂಬಂಧ ಸುಧಾರಣೆ.
ಮಕರ
ಸಂಗಾತಿ ಜತೆ ಆರೋಗ್ಯಕರ ಸಂಬಂಧ ಬೆಳೆಸಿ. ದುಡುಕು ವರ್ತನೆ ಸಂಘರ್ಷಕ್ಕೆ ಕಾರಣವಾಗುವುದು.ಹೆಚ್ಚು ಹಣ ಗಳಿಸುವ ಯೋಜನೆ ಫಲಿಸದು.
ಕುಂಭ
ಎಲ್ಲ ವಿಚಾರಗಳಲ್ಲಿ ಇಂದು ಎಚ್ಚರಿಕೆ ವಹಿಸಿ.ನೀವೆಸಗುವ ತಪ್ಪು ದೊಡ್ಡ ಪರಿಣಾಮ ಉಂಟು ಮಾಡಬಹುದು. ಹೊಂದಾಣಿಕೆ ಅವಶ್ಯ.
ಮೀನ
ವೃತ್ತಿಯಲ್ಲಿ ಹೆಚ್ಚುವರಿ ಜವಾಬ್ದಾರಿ. ಬಿಡುವಿಲ್ಲದ ಕಾರ್ಯ. ನಿಮ್ಮ ಅಭಿಪ್ರಾಯ ಮುಕ್ತವಾಗಿ ವ್ಯಕ್ತಪಡಿಸಲು ಹಿಂಜರಿಕೆ ಬೇಡ.ಅದರಿಂದ ಭಿನ್ನಮತ ನಿವಾರಣೆ.