SHOCKING| ಸೆಲ್ಪಿ ತಂದ ಆಪತ್ತು: ಮೂವರ ಪ್ರಾಣಕ್ಕೆ ಕುತ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೆಲ್ಫಿಯ ಮೋಜಿಗೆ ಸಿಲುಕಿ ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸಿ ಸಾಯುತ್ತಿದ್ದಾರೆ. ಇತ್ತೀಚೆಗೆ, ಸೆಲ್ಫಿ ಮೋಜು ಮೂರು ಜೀವಗಳನ್ನು ತೆಗೆದುಕೊಂಡಿದೆ. ಕೆರೆ ಬಳಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಈ ದಾರುಣ ಘಟನೆ ಸಿದ್ದಿಪೇಟೆ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಹೈದರಾಬಾದ್‌ನ ಯಾಕತ್ ಪುರದ ಶೇಖ್ ಕೈಸರ್ (28), ಶೇಖ್ ಮುಸ್ತಫಾ (3) ಮತ್ತು ಜಡಗಿಗಿರಿಗುಟ್ಟದ ಅಹ್ಮದ್ ಸೊಹೈಲ್ (17) ಸಿದ್ದಿಪೇಟೆ ಜಿಲ್ಲೆಯ ಗಜ್ವೇಲ್ ಮಂಡಲದ ಮಕ್ತಮಸನ್ ಪಲ್ಲಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು.

ವರ್ಗಲ್ ಮಂಡಲದ ಸಮಲಾಪಳ್ಳಿಯ ಅಣೆಕಟ್ಟೆ ಬಳಿಯ ಸಂಬಂಧಿಕರ ಜಮೀನಿಗೆ ಹೋಗಿದ್ದರು. ಕೆರೆಯಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಮುಸ್ತಫಾ ಕೆರೆಗೆ ಬಿದ್ದಿದ್ದಾನೆ. ಕೈಸರ್ ಮತ್ತು ಸೊಹೈಲ್ ಅವರನ್ನು ರಕ್ಷಿಸಲು ಅವರೂ ನೀರೊಳಗೆ ಬಿದ್ದಿದ್ದಾರೆ.

ಈಜು ಬಾರದೆ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಗಜ್ವೇಲ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೇಗಂಪೇಟೆ ಎಸ್‌ಐ ಅರುಣ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!