ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಪ್ರಿಯಾಂಕಾ ಚೋಪ್ರಾ ಮುಂಚೆ ಹೀಗಿರಲಿಲ್ಲ, ಮೂಗಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಅವರು ಇನ್ನೂ ಸುಂದರವಾಗಿ ಕಾಣುತ್ತಾರೆ ಎನ್ನುವುದು ಹಲವರ ಅಭಿಪ್ರಾಯ ಆದರೆ ಅಸಲಿ ವಿಚಾರ ಬೇರೆಯೇ ಇದೆ.
ಸೌಂದರ್ಯಕ್ಕಾಗಿ ಅಲ್ಲ, ಮೆಡಿಕಲ್ ಕಂಡೀಷನ್ನಿಂದಾಗಿ ಪ್ರಿಯಾಂಕ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ಈ ಸಮಯದಲ್ಲಿ ಮೂರು ಸಿನಿಮಾಗೆ ಪ್ರಿಯಾಂಕ ಒಕೆ ಹೇಳಿದ್ದರು. ಆದರೆ ಮೂಗಿನ ಕಾರಣಕ್ಕಾಗಿ ಮೂರು ಸಿನಿಮಾಗಳಲ್ಲಿಯೂ ಅವರನ್ನು ಹೊರಕಳಿಸಲಾಗಿತ್ತು. ಕೈಯಲ್ಲಿ ಯಾವುದೇ ಪ್ರಾಜೆಕ್ಟ್ ಇಲ್ಲದೆ ಪ್ರಿಯಾಂಕಾ ಡಿಪ್ರೆಷನ್ನಲ್ಲಿದ್ದರಂತೆ.
ಈ ಸಮಯದಲ್ಲಿ ಪ್ರಿಯಾಂಕಾ ತಂದೆ ಸಾಕಷ್ಟು ಮಾನಸಿಕ ಧೈರ್ಯ ತುಂಬಿ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ತದನಂತರ ಆಫರ್ಗಳು ಪ್ರಿಯಾಂಕಾರತ್ತ ಮುಖಮಾಡಿವೆ. ಈ ಬಗ್ಗೆ ಪ್ರಿಯಾಂಕ ಸಂದರ್ಶನವೊಂದರಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ. ಸದ್ಯಕ್ಕೆ ಪ್ರಿಯಾಂಕಾ ಲವ್ ಅಗೇನ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಿದ್ದಾರೆ.