ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮನಗರ ಜಿಲ್ಲೆಯಿಂದ ಈವರೆಗೂ ನಾಲ್ಕು ಮಂದಿ ಸಿಎಂ ಆಗಿದ್ದಾರೆ, ನನಗೂ ಸಿಎಂ ಆಗುವ ಆಸೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ರಾಮನಗರ ನಾಲ್ವರು ಸಿಎಂಗಳನ್ನು ಹುಟ್ಟುಹಾಕಿದೆ, ದೊಡ್ಡ ನಾಯಕರನ್ನು ರಾಜ್ಯಕ್ಕೆ ಕೊಟ್ಟಸ್ಥಳ ಇದು, ಇಲ್ಲಿಂದ ಗೆದ್ದು ನನಗೂ ಸಿಎಂ ಆಗುವ ಆಸೆ ಇದೆ, ಅದಕ್ಕೆ ನೀವು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.
ಮೇ.15 ಕ್ಕೆ ಕಾಂಗ್ರೆಸ್ ಸರ್ಕಾರ ರಚಿಸಲಿದೆ, ಇದು ನಮ್ಮ ಗ್ಯಾರೆಂಟಿ, ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಈ ಬಾರಿ ನಮಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.