ಮೋಚಾ ಚಂಡಮಾರುತ: ನಾವು ಸೇಫ್‌, ಆ ದೇಶಗಳಿಗೆ ಅಪಾಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೋಚಾ ಚಂಡಮಾರುತದ ಪ್ರಭಾವ ನಮ್ಮ ದೇಶದ ಮೇಲೆ ಅಷ್ಟಾಗಿ ಆಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೇಳಿದೆ.. ಆದರೆ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಎಚ್ಚರವಾಗಿರಬೇಕು. ಇದೇ ತಿಂಗಳ 14ರಂದು ಮ್ಯಾನ್ಮಾರ್ ಕರಾವಳಿಯನ್ನು ದಾಟುವ ಸಾಧ್ಯತೆ ಇದೆ.

ಸೋಮವಾರ ಬೆಳಗ್ಗೆ ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತಿದೆ.  ಮಂಗಳವಾರದ ವೇಳೆಗೆ ಬಲಗೊಂಡು ಚಂಡಮಾರುತವಾಗಿ ಪರಿಣಮಿಸಲಿದೆ. ನಂತರ ಉತ್ತರ-ಪಶ್ಚಿಮಕ್ಕೆ ಮಧ್ಯ ಪೂರ್ವಕ್ಕೆ ಸರಿದು ಬಂಗಾಳಕೊಲ್ಲಿಯನ್ನು ಪ್ರವೇಶಿಸಲಿದೆ. ಇದೇ ತಿಂಗಳ ಹತ್ತರ ಸುಮಾರಿಗೆ ಚಂಡಮಾರುತವಾಗಿ ಮಾರ್ಪಡಲಿದೆ. ಇದು ಬಲಗೊಂಡು ತೀವ್ರ ಚಂಡಮಾರುತವಾಗಿ ಪರಿಣಮಿಸಲಿದ್ದು, ಮೊದಲು ವಾಯುವ್ಯಕ್ಕೆ ಚಲಿಸಿ ಈ ತಿಂಗಳ 11ರವರೆಗೆ ಉತ್ತರ-ಈಶಾನ್ಯಕ್ಕೆ ತನ್ನ ದಿಕ್ಕನ್ನು ಬದಲಾಯಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇದು ಅತ್ಯಂತ ತೀವ್ರವಾದ ಚಂಡಮಾರುತವಾಗಿ ಬಲಗೊಳ್ಳಲಿದ್ದು, ಈಶಾನ್ಯಕ್ಕೆ ಚಲಿಸುವಾಗ ಇದೇ ತಿಂಗಳ 14 ರಂದು ದಕ್ಷಿಣ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಡುವೆ ಕರಾವಳಿಯನ್ನು ದಾಟಲಿದೆ ಎಂದು ಇಸ್ರೋ ಹವಾಮಾನ ತಜ್ಞರು ತಿಳಿಸಿದ್ದಾರೆ. ಈ ಚಂಡಮಾರುತಕ್ಕೆ ‘ಮೋಚಾ’ (MOCHA) ಎಂದು ಹೆಸರಿಸಲಾಗಿದೆ. ಈ ಚಂಡಮಾರುತವು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಡುವೆ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆಯಾದರೂ, ಇದು ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಇದರಿಂದಾಗಿ ಈ ಎರಡು ರಾಜ್ಯಗಳೂ ಈ ಚಂಡಮಾರುತದ ಆತಂಕದಲ್ಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!