ಕೊಡಗಿನಲ್ಲಿ ಮೊದಲಿಗರಾಗಿ ಹಕ್ಕು ಚಲಾಯಿಸಿದ ಅಭ್ಯರ್ಥಿಗಳು

ಹೊಸದಿಗಂತ ವರದಿ ಮಡಿಕೇರಿ: 

ಈ ಬಾರಿಯ ವಿಧಾನಸಭಾ ಚುನಾವಣೆಗೆ ಬುಧವಾರ ಬೆಳಗ್ಗೆ ಮತದಾನ ಆರಂಭವಾಗಿದ್ದು,ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚುರಂಜನ್ ಅವರುಗಳು ತಮ್ಮತಮ್ಮ ಮತಗಟ್ಟೆಗಳಲ್ಲಿ ಮೊದಲಿಗರಾಗಿ ತಮ್ಮ ಹಕ್ಕು ಚಲಾಯಿಸಿದರು.

ಮತದಾನ ಆರಂಭವಾಗುತ್ತಿದ್ದಂತೆ ಕೆ.ಜಿ.ಬೋಪಯ್ಯ ಅವರು ಪತ್ನಿ ಕುಂತಿ ಅವರೊಂದಿಗೆ ನಗರದ ಜೂನಿಯರ್ ಕಾಲೇಜಿನ ಮತಗಟ್ಟೆಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸಿದರು. ಬಳಿಕ ಅವರು ತಮ್ಮ ಕ್ಷೇತ್ರಕ್ಕೆ ಪ್ರಯಾಣ ಬೆಳೆಸಿದರು. ಬೋಪಯ್ಯ ಅವರಿಗೆ ತಮ್ಮ ಮತವನ್ನು ತಮಗೇ ಹಾಗೂ ಪತ್ನಿ ಕುಂತಿ ಅವರಿಗೆ ತಮ್ಮ ಮತವನ್ನು ತಮ್ಮ ಪತಿಗೆ ಚಲಾಯಿಸಲು ಅವಕಾಶವಿಲ್ಲದಿರುವುದು ವಿಶೇಷ.

ಅತ್ತ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಎಂ. ಪಿ. ಅಪ್ಪಚ್ಚು ರಂಜನ್ ಅವರು ಸೋಮವಾರಪೇಟೆ‌ ತಾಲೂಕಿನ ಕುಂಬೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪ್ರಥಮ ಮತ ಚಲಾಯಿಸಿದರು. ಮಡದಿ ಶೈಲಾ ಎರಡನೆಯವರಾಗಿ ತಮ್ಮ ಹಕ್ಕು ಚಲಾಯಿಸಿದರು.
ಅಂಗರಕ್ಷಕನಿಲ್ಲದೆ, ತಮ್ಮ ನಿವಾಸದಿಂದ ತಾವೇ ಕಾರು ಚಲಾಯಿಸಿಕೊಂಡು ಮಡದಿಯೊಂದಿಗೆ ಮತಗಟ್ಟೆಗೆ ಆಗಮಿಸಿದ ಅಪ್ಪಚ್ಚು ರಂಜನ್, ಮತ ಚಲಾಯಿಸಿದ ನಂತರ ಶಾಯಿ ಹಾಕಿದ ಬೆರಳು ಪ್ರದರ್ಶಿಸಿ, ಸುದ್ದಿಗಾರರೊಂದಿಗೆ ಮಾತಾನಾಡಿದರು.

ಈ ಬಾರಿ ನನಗೆ ಪ್ರತಿಸ್ಪರ್ಧಿಗಳೇ ಇಲ್ಲ. ನಾನು ಮಾಡಿರುವ ಅಭಿವೃದ್ದಿ ಕಾರ್ಯಗಳು ನನಗೆ ಶ್ರೀರಕ್ಷೆಯಾಗಿವೆ. ಬಜರಂಗದಳದಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸುತ್ತೇವೆ ಎಂದಿರುವುದು ಕಾಂಗ್ರೆಸ್’ಗೆ ಮುಳುವಾಗಲಿದೆ. ಕನಿಷ್ಟ 30 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಮತ ಚಲಾವಣೆ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಮಡಿಕೇರಿ ನಗರದ ತಾಲೂಕು ಪಂಚಾಯತ್ ಮತಗಟ್ಟೆಯಲ್ಲಿ ಪತ್ನಿ ರೂಪಶ್ರೀ ಅವರೊಂದಿಗೆ ಬಂದು ಮತದಾನ ಮಾಡಿದರು.

ನಾಪಂಡ ಮುತ್ತಪ್ಪ: ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು ಸಿದ್ದಲಿಂಗಪುರದ ಮತಗಟ್ಟೆ ಸಂಖ್ಯೆ 96ರಲ್ಲಿ ತಮ್ಮ ಮತ ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಮಂಥರ್ ಗೌಡ ಅವರಿಗೂ ತಮ್ಮ ಮತ ಚಲಾಯಿಸಲು ಅವಕಾಶವಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!