ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಅವರು ತಮ್ಮ ಕುಟುಂಬ ಸಮೇತ ವಾರ್ಡ್ ಸಂಖ್ಯೆ-35ರ ಬೂತ್ ಸಂಖ್ಯೆ-53ರಲ್ಲಿ ನಗರದ ಎಂ.ಪಿ.ಎಚ್.ಎಸ್.ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ತಾಯಿ ಆರುಣಾದೇವಿ ಸಿ ಪಾಟೀಲ್, ಸಹೋದರ ಆಲೋಕ ಪಾಟೀಲ್, ಪತ್ನಿ ಲಕ್ಷ್ಮಿ ಪಾಟೀಲ್ ಅವರು ಜೊತೆಗೂಡಿ ಮತ ಚಲಾವಣೆ ಮಾಡಿದರು.