ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರೋನ್ ಬಳಸಿ ಪಾಕಿಸ್ತಾನದಿಂದ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿದ್ದ ಮೂವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸ್ನ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ ಪಾಕಿಸ್ತಾನದ ಡ್ರಗ್ಸ್ ಗ್ಯಾಂಗ್ನೊಂದಿಗೆ ಸಂಪರ್ಕ ಹೊಂದಿದ್ದ ಮೂವರು ಭಾರತೀಯರನ್ನು ಬಂಧಿಸಿದೆ.
ಆರೋಪಿಗಳಾದ ಮಲ್ಕಿತ್ ಸಿಂಗ್, ಧರ್ಮೇಂದ್ರ ಸಿಂಗ್ ಮತ್ತು ಹರ್ಪಾಲ್ ಸಿಂಗ್ ಪಂಜಾಬ್ ನಿವಾಸಿಗಳು. ಡ್ರಗ್ಸ್ ಮಾಫಿಯಾದಿಂದ ಹವಾಲಾ ಜಾಲದ ಮೂಲಕ ಪಾಕಿಸ್ತಾನಕ್ಕೆ ವರ್ಗಾವಣೆಯಾದ ಹಣಕ್ಕೆ ಪ್ರತಿಯಾಗಿ ಆರೋಪಿಗಳು ಪಾಕಿಸ್ತಾನದಿಂದ ಡ್ರಗ್ಸ್ ತರಿಸಿ ಪಂಜಾಬ್ ಮತ್ತು ಇತರ ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಂಜಾಬ್ನಿಂದ ತಲೆಮರೆಸಿಕೊಂಡಿದ್ದ ಈ ಮೂವರು ಡ್ರಗ್ಸ್ ಪೂರೈಕೆದಾರರು ಅಮೆರಿಕ ಮತ್ತು ಫಿಲಿಪೈನ್ಸ್ನಲ್ಲಿ ಸಂಪರ್ಕ ಹೊಂದಿದ್ದರು. ಆರೋಪಿಗಳಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಮೊಬೈಲ್ ಫೋನ್ಗಳಲ್ಲಿ ಫಿಲಿಫೈನ್ಸ್ ಮತ್ತು ಅಮೆರಿಕದ ಫೋನ್ ಸಂಖ್ಯೆಗಳು ಪತ್ತೆಯಾಗಿವೆ. ಡ್ರೋನ್ಗಳ ಮೂಲಕ ಪಾಕಿಸ್ತಾನ ಸಾಗಿಸುವ ಡ್ರಗ್ ಎಲ್ಲಿಂದ ಸಂಗ್ರಹಿಸಬೇಕೆಂದು ಮಾರ್ಗದರ್ಶನ ನೀಡಲು ಹ್ಯಾಂಡ್ಲರ್ಗಳು ಬಳಸಿರುವ ಸಂಖ್ಯೆಗಳು ಸಿಕ್ಕಿವೆ.