Wednesday, June 7, 2023

Latest Posts

ಮಗಳಿಗಾಗಿ ಊರೆಲ್ಲಾ ಹುಡುಕಿದ್ರು, ಆದ್ರೆ ಆಕೆ ಸಿಕ್ಕಿದ್ದು ಎಲ್ಲಿ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಕೆ.ಆರ್. ಪುರದ ಜನತಾ ಕಾಲೋನಿಯಲ್ಲಿ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ಪೋಷಕರು ಪೊಲೀಸರ ಮೊರೆ ಹೋಗಿದ್ದಾರೆ.

ಮಗಳು ಕಾಣದೇ ಗಾಬರಿಯಾದ ಮೀನಾ ಹಾಗೂ ಅವರ ಪತಿ ತಕ್ಷಣವೇ ಪೊಲೀಸರ ಬಳಿ ಬಂದು ಮಗಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಆತಂಕ ಅರ್ಥಮಾಡಿಕೊಂಡ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಲ್ಲೆಡೆ ಹುಡುಕಾಡಿದ್ದಾರೆ. ಜನತಾ ಕಾಲೋನಿಯಲ್ಲಿ ಆಟವಾಡುತ್ತಿದ್ದ ಮಗು ಇದ್ದಕ್ಕಿಂದಂತೆಯೇ ಕಾಣಿಸುತ್ತಿಲ್ಲ ಎಂದರೆ ಅದೇ ಏರಿಯಾದಲ್ಲಿಯೇ ಇರಬಹುದು ಎಂದು ಪೊಲೀಸರು ಅಲ್ಲಿಯೇ ಹುಡುಕಾಟ ನಡೆಸಿದ್ದಾರೆ.

ಕೊನೆಗೆ ಮನೆಯೊಳಗೂ ಹುಡುಕಾಟ ನಡೆಸಿದ್ದು, ಬಟ್ಟೆಗಳ ರಾಶಿಯ ಅಡಿಯಲ್ಲಿ ಮಗಳು ಮಲಗಿರುವುದು ಕಾಣಿಸಿದೆ. ಚೆನ್ನಾಗಿ ನಿದ್ದೆ ಮಾಡಿದ್ದ ಮಗುವಿಗೆ ಮೈಮೇಲೆ ಬಟ್ಟೆ ಬಿದ್ದರೂ ಎಚ್ಚರವಾಗಿಲ್ಲ. ಪೋಷಕರ ಬೇಜಾವಾಬ್ದಾರಿತನಕ್ಕೆ ಪೊಲೀಸರು ರೋಸಿಹೋಗಿದ್ದು ಮಗುವಿನ ಮೇಲೆ ನಿಗಾ ಇರಲಿ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!