IPL 2023: ಚೊಚ್ಚಲ ಶತಕ ಬಾರಿಸಿದ ಸೂರ್ಯಕುಮಾರ್​ ಯಾದವ್​

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್​ ಟೈಟನ್ಸ್​ ವಿರುದ್ಧ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದ ಸೂರ್ಯಕುಮಾರ್​ ಯಾದವ್​ ಅವರು ಐಪಿಎಲ್​ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದಾರೆ.

ಆರ್​ಸಿಬಿ ವಿರುದ್ಧದ ಕಳೆದ ಪಂದ್ಯದಲ್ಲಿ 83 ರನ್​ ಬಾರಿಸಿದ್ದು ಸೂರ್ಯಕುಮಾರ್​ ಅವರ ಐಪಿಎಲ್​ನ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಆದರೆ ಇದೀಗ ಶತಕ ಬಾರಿಸುವ ಮೂಲಕ ತಮ್ಮ ವೈಯಕ್ತಿಕ ಗರಿಷ್ಠ ಮೊತ್ತವನ್ನು ಹೆಚ್ಚಿಸಿದ್ದಾರೆ.

49 ಎಸೆತದಲ್ಲಿ ಅವರು ಬರೋಬ್ಬರಿ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ ಅಜೇಯ 103 ರನ್​ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!