Sunday, June 4, 2023

Latest Posts

ದಿನಭವಿಷ್ಯ: ಅನಿರೀಕ್ಷಿತ ಪ್ರಸಂಗ ಉದ್ಭವ, ನೀವಿದಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತೀರಿ?

ಮೇಷ
ಪ್ರಮುಖ ವಿಷಯಗಳನ್ನು ಕೂಡಲೇ ಇತ್ಯರ್ಥ ಪಡಿಸಿ. ಅದನ್ನು ಮುಂದೆ ಹಾಕುವುದು ಸರಿಯಲ್ಲ.  ಕುಟುಂಬ ಮತ್ತು ವೃತ್ತಿಯ ಮಧ್ಯೆ ಸಮನ್ವಯವಿರಲಿ.

ವೃಷಭ
ಕೌಟುಂಬಿಕ ಶಾಂತಿ ಮರಳಲಿದೆ. ಆದರೂ ನಿಮ್ಮ ಮನಸ್ಸಿನ ಒತ್ತಡ ಕಡಿಮೆಯಾಗದು. ಸಂಬಂಧ ಸುಧಾರಿಸಲು ಆದ್ಯತೆ ಕೊಡಿ. ಬಿಗುಮಾನ ಬಿಡಿ.

ಮಿಥುನ
ಯಾವುದೋ ಕಾರಣಕ್ಕೆ ಇಂದು ಭಾವುಕರಾಗಿ ವರ್ತಿಸುವಿರಿ. ಕೋಪವನ್ನು ನಿಯಂತ್ರಿಸಿ. ಆತ್ಮೀಯರ ಜತೆ ಜಗಳವಾಡಲು ಹೋಗದಿರಿ.

ಕಟಕ
ಯಾರನ್ನೂ ಕುರುಡಾಗಿ ನಂಬದಿರಿ. ನಂಬಿದರೆ ನೀವೇ ತಾಪತ್ರಯಕ್ಕೆ ಸಿಲುಕುವಿರಿ. ಕುಟುಂಬದ ಜತೆ ಹೆಚ್ಚು ಸಮಯ ಕಳೆಯಿರಿ. ನಿರಾಳತೆ ಸಿಗುವುದು.

ಸಿಂಹ
ನಿಮ್ಮ ಕಾರ್ಯ ಈಡೇರದಿದ್ದರೆ ಹತಾಶೆ ಬೇಡ. ಮತ್ತೆ ಯತ್ನ ಮಾಡಿರಿ. ಆರೋಗ್ಯದ ಸಮಸ್ಯೆ ತುಸು ಕಾಡಬಹುದು. ಮಿತಾಹಾರ ಒಳಿತು.

ಕನ್ಯಾ
ಇತರರ ಜತೆ ಬೆರೆಯಲು ಗಮನ ಕೊಡಿ. ಇದರಿಂದ ಏಕಾಂಗಿಯಾಗಿ ಕೊರಗುವುದು ತಪ್ಪಬಹುದು. ಬಂಧುಗಳ ಬೆಂಬಲ ಸಿಗುವುದು. ಆರ್ಥಿಕ ಒತ್ತಡ.

ತುಲಾ
ಈ ದಿನ ನೀರಸ  ಎಂದು ನಿಮಗೆ ಅನಿಸಬಹುದು. ಆದರೆ ನಿಮ್ಮ ಭಾವನೆ ಸುಳ್ಳು ಮಾಡುವ ಬೆಳವಣಿಗೆ ಸಂಭವಿಸುವುದು. ದಿನದಂತ್ಯಕ್ಕೆ ಹರ್ಷ.

ವೃಶ್ಚಿಕ
ಸಮಸ್ಯೆಯಲ್ಲಿ ತೊಳಲಾಡುವಿರಿ. ಕೆಲವರ ಅಸಹಕಾರ ನೋವು ತರುವುದು. ಬಂಧುಗಳಿಂದ ಟೀಕೆ ಕೇಳುವಿರಿ.  ಆಧ್ಯಾತ್ಮಿಕ ಆಸಕ್ತಿ ಹುಟ್ಟಬಹುದು.

ಧನು
ನಿಮ್ಮ ನೆರವಿಗೆ ಇತರರು ಬರುವರು. ಅವರ ಸಹಕಾರದಿಂದ ಗುರಿ ಸಾಧಿಸುವಿರಿ. ಇತರರ ಕಾರ್ಯ ಶ್ಲಾಘಿಸಲು ಮರೆಯದಿರಿ.  ಹಣಕಾಸು ಸಮಸ್ಯೆ.

ಮಕರ
ಅನಿರೀಕ್ಷಿತ ಪ್ರಸಂಗ ಉದ್ಭವಿಸುವುದು. ಕೆಲವು ಆಘಾತ ತಂದರೆ ಕೆಲವು ಸಂತೋಷ ತರುವವು. ಆತ್ಮೀಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ.

ಕುಂಭ
ನಿಮ್ಮ ಖಾಸಗಿ ಭಾವನೆಯು ಕೆಲಸದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ವೃತ್ತಿಯಲ್ಲಿ ಹಿನ್ನಡೆ ಉಂಟಾಗಬಹುದು.

ಮೀನ
ಕುಟುಂಬ ಸದಸ್ಯರ ಜತೆ ಹೆಚ್ಚು ಸಮಯ ಕಳೆಯಿರಿ. ಅವರನ್ನು ಕಡೆಗಣಿಸಿದ ಭಾವನೆ ಮೂಡದಂತೆ ನೋಡಿಕೊಳ್ಳಿ. ಆರ್ಥಿಕ ಸುಧಾರಣೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!