CINEMA| ಅದಾ ಶರ್ಮಾ ಕಲೆಕ್ಷನ್‌ ಕ್ವೀನ್:‌ ನೂರು ಕೋಟಿ ದಾಟಿದ ʻದಿ ಕೇರಳ ಸ್ಟೋರಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇರಳ ಸ್ಟೋರಿ ಸಿನಿಮಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಕೇರಳ ಸ್ಟೋರಿ ನೈಜ ಘಟನೆಗಳನ್ನು ಆಧರಿಸಿದ ಚಲನಚಿತ್ರವಾಗಿದ್ದು, ಕೇರಳದಲ್ಲಿ ಕೆಲ ಹೆಣ್ಣುಮಕ್ಕಳನ್ನು ಭಯೋತ್ಪಾದಕರನ್ನಾಗಿ ಪರಿವರ್ತಿಸುವ ಕಥಾವಸ್ತುವನ್ನು ಹೊಂದಿದೆ. ಟೀಸರ್ ಬಿಡುಗಡೆಯಾದಾಗಿನಿಂದ ಈ ಸಿನಿಮಾದ ಬಗ್ಗೆ ಸಾಕಷ್ಟು ಟೀಕೆಗಳು ಬರುತ್ತಿವೆ. ಅದಾ ಶರ್ಮಾ, ಸಿದ್ಧಿ ಇದ್ನಾನಿ, ಯೋಗಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕೇರಳ ಸ್ಟೋರಿ ಸಿನಿಮಾ ಮೇ 5 ರಂದು ದೇಶಾದ್ಯಂತ ಬಿಡುಗಡೆಯಾಗಿತ್ತು. ಕೆಲವರು ಸಿನಿಮಾವನ್ನು ಬೆಂಬಲಿಸಿದರೆ ಕೆಲವರು ಟೀಕೆ ಮಾಡುತ್ತಿದ್ದಾರೆ. ತಮಿಳುನಾಡು ಮತ್ತು ಬಂಗಾಳ ರಾಜ್ಯಗಳಲ್ಲಿ ಈ ಚಲನಚಿತ್ರವನ್ನು ನಿಷೇಧಿಸಿದರೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ಅನೇಕ ರಾಜ್ಯಗಳಲ್ಲಿ ಚಿತ್ರಕ್ಕೆ ತೆರಿಗೆ ಮುಕ್ತವನ್ನು ನೀಡಲಾಗಿದೆ. ಕೇರಳ ಸ್ಟೋರಿ ಚಿತ್ರವು ಬಾಯಿ ಮಾತಿನಲ್ಲಿ ಉತ್ತಮ ಯಶಸ್ಸನ್ನು ಗಳಿಸಿತು.

ಕೇವಲ 20 ಕೋಟಿ ಬಜೆಟ್ ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಸಿನಿಮಾ ಮೊದಲ ದಿನವೇ 8 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದೆ. ಮತ್ತು ಈ ಸಿನಿಮಾ ಹತ್ತು ದಿನಕ್ಕೆ 112 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಫುಲ್ ಫಾರ್ಮ್ ನಲ್ಲಿದೆ. ಮೊದಮೊದಲು ಆಡಲೇ ಇಲ್ಲ ಎಂದುಕೊಂಡಿದ್ದ ಈ ಸಿನಿಮಾ ಈಗ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!