ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಬುಲೆನ್ಸ್‌ಗೆ ಬಾಡಿಗೆ ಕೊಡಲು ಹಣವಿಲ್ಲದ್ದಕ್ಕೆ ತಂದೆಯೊಬ್ಬ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿಟ್ಟುಕೊಂಡು ಬಸ್‍ನಲ್ಲಿ ಸಂಚರಿಸಿದ ಮನಕಲಕುವ ಘಟನೆ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಈ ಘಟನೆ ನಡೆದಿದೆ.
ಪಶ್ಚಿಮ ಬಂಗಾಳದ ಸಿಲಿಗುರಿಯ ಆಸ್ಪತ್ರೆಯೊಂದರಲ್ಲಿ ಆಶಿಮ್ ದೇಬ್ಶರ್ಮಾ ಎಂಬಾತ ತನ್ನ 5 ತಿಂಗಳ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ದಾಖಲಿಸಿದ್ದ. ಅಲ್ಲಿನ ವೈದ್ಯರು 6 ದಿನದಿಂದ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಈ ವೇಳೆ ಮಗುವಿನ ಚಿಕಿತ್ಸೆಗಾಗಿ 16,000 ರೂ. ಖರ್ಚು ಕೂಡ ಮಾಡಲಾಗಿತ್ತು.
ಸಿಲಿಗುರಿಯಿಂದ 200 ಕಿ.ಮೀ ದೂರದಲ್ಲಿರುವ ಕಲಿಯಗಂಜ್ ಎಂಬಲ್ಲಿ ಆಶಿಮ್ ದೇಬ್ಶರ್ಮಾ ವಾಸಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಮಗುವಿನ ಶವವನ್ನು ತನ್ನೂರಿಗೆ ತೆಗೆದುಕೊಂಡು ಹೋಗಬೇಕಿತ್ತು. ಆದರೆ ಅಂಬುಲೆನ್ಸ್‍ನ ಡ್ರೈವರ್ 8,000 ರೂ. ಪಾವತಿಸುವಂತೆ ಕೇಳಿದ್ದಾನೆ. ಬಡತನದಿಂದ ಬಳಲುತ್ತಿದ್ದ ಆಶಿಮ್ ದೇಬ್ಶರ್ಮಾಗೆ ಅಷ್ಟೊಂದು ಹಣವನ್ನು ನೀಡಲು ಸಾಧ್ಯವಾಗದೆ 5 ತಿಂಗಳ ಮಗುವಿನ ಶವವನ್ನು ಬ್ಯಾಗ್‍ನಲ್ಲಿ ಕಟ್ಟಿಕೊಂಡು 200 ಕಿಮೀವರೆಗೆ ಬಸ್‍ನಲ್ಲಿ ಪ್ರಯಾಣಿಸಿದ್ದಾನೆ.
ಘಟನೆಗೆ ಸಂಬಂಧಿಸಿ ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿಜೆಪಿಯ ಸುವೇಂದು ಅಧಿಕಾರಿ ಬೇಸರ ವ್ಯಕ್ತಪಡಿಸಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.