ಮೊದಲ ಬಾರಿಗೆ ಮಗಳ ಫೇಸ್‌ ರಿವೀಲ್‌ ಮಾಡಿದ ನಟ ಧ್ರುವ ಸರ್ಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ಧ್ರುವ ಸರ್ಜಾ ದಂಪತಿ ಮೊದಲ ಬಾರಿಗೆ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ. ಈ ಫೋಟೋಗಳು ಸೋಶಿಯಲ್​​ ಮೀಡಿಯಾ ತುಂಬಾ ವೈರಲ್​​ ಆಗುತ್ತಿವೆ.

ನಟ ಧ್ರುವ ಸರ್ಜಾ ಅವರಿಗೆ ಅಕ್ಟೋಬರ್ ತಿಂಗಳಲ್ಲಿ ಮಗಳು ಜನಿಸಿದ್ದಳು. ಆದರೆ ಧ್ರುವ ಅವರು ಮಗಳ ಮುಖವನ್ನು ರಿವೀಲ್ ಮಾಡಿರಲಿಲ್ಲ. 7 ತಿಂಗಳ ಬಳಿಕ ಮೊದಲ ಬಾರಿಗೆ ಮಗಳ ಮುಖ ತೋರಿಸಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಮಗು ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ಇದಾಗಿದೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

ಧ್ರುವ ಸರ್ಜಾ ಅವರು ಮಗಳ ಫೋಟೋ ಹಂಚಿಕೊಂಡು ಸರ್​ಪ್ರೈಸ್​ ನೀಡಿರುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!