ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಂತ ಸಹೋದರಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶ ರಾಜ್ಯದ ಶಹಜಹಾನ್ಪುರದಲ್ಲಿ ನಡೆದಿದೆ. ಮೇಲಾಗಿ ಆಕೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಳ್ಳುವಾಗ ವಿಡಿಯೋ ತೆಗೆದಿದ್ದಾನೆ. ಪೈಶಾಚಿಕ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂತ್ರಸ್ತೆಯ ಹೆಸರು ಸರೋಜ್ ಯಾದವ್ (31). ಆಕೆಯ ಸಹೋದರನ ಹೆಸರು ಸಂಜೀವ್ ಯಾದವ್. ನೆರೆಮನೆಯವರೊಂದಿಗೆ ಸಂತ್ರಸ್ತೆಯ ಪೋಷಕರು ಜಗಳವಾಡಿದ್ದರು. ಪೊಲೀಸರು ಬಂದು ಸರೋಜ್ ಯಾದವ್ ಪೋಷಕರನ್ನು ಠಾಣೆಗೆ ಕರೆದೊಯ್ದರು. ಈ ಅನುಕ್ರಮದಲ್ಲಿ ಸರೋಜ್ ಯಾದವ್ ಅಪ್ಸೆಟ್ ಆಗಿ ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದ್ದಳು.
ಆದರೆ, ಆಕೆಯನ್ನು ತಡೆಯಬೇಕಿದ್ದ ಸಹೋದರ ಸಂಜೀವ್ ಯಾದವ್ ತನ್ನ ತಂಗಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾನೆ. ಬೆಂಕಿ ಹಚ್ಚಿಕೊಂಡು ನೋವು ತಾಳಲಾರದೆ ಜೋರಾಗಿ ಕಿರುಚುತ್ತಿರುವುದು ಎಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಂತ್ರಸ್ತೆಯ ಕಿರುಚಾಟ ಕೇಳಿ ಪಕ್ಕದಲ್ಲಿದ್ದವರು ಹೊರಗೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಸಂತ್ರಸ್ತೆ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾಳೆ. ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
#shahjhanpur– दूसरे को फंसाने के लिए खुद को किया आग के हवाले
शाहजहांपुर में कुआ विवाद को लेकर महिला ने खुद को किया आग के हवाले, पड़ोसी से कुआ को लेकर था विवाद , युवती को मेडिकल कॉलेज में कराया गया भर्ती
@shahjhanpurpo pic.twitter.com/ierspwrOGG— Pankaj Sharma (PPS) (@pankajpps402) May 14, 2023