ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದ ವಿವಾಹ ಸಮಾರಂಭದ ವೇಳೆ ವಧು-ವರ ವಿಷ ಸೇವಿಸಿರುವ ಘಟನೆ ವರದಿಯಾಗಿದೆ.
ಮೇ 16 ರಂದು ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಸ್ಥಾನದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ವಧು ವರರ ನಡುವೆ ಜಗಳ ಉಂಟಾಗಿತ್ತು. ಇನ್ನು ಹಾರ ಬದಲಾಯಿಸಿ ತಾಳಿ ಕಟ್ಟಬೇಕು ಎನ್ನುವಾಗಲೇ ವರ ಮದುವೆ ವೇದಿಕೆಯ ಬದಿಗೆ ಹೋಗಿ ವಿಷ ಸೇವಿಸಿ ಆ ಬಳಿಕ ಮದುವೆ ವೇದಿಕೆಯಲ್ಲಿ ತಾನು ವಿಷ ಸೇವಿಸಿ ಬಂದಿದ್ದೇನೆ ಎಂದು ವಧುವಿಗೆ ಹೇಳಿದ್ದಾನೆ.
ಇನ್ನು ವರನ ಮಾತನ್ನು ಕೇಳಿ ವಧು ಕೂಡ ವಿಷ ಸೇವಿಸಿದ್ದು, ವರ-ವಧುವನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ 21 ವರ್ಷದ ವರ ಮೃತಪಟ್ಟಿದ್ದು, ವಧು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. ಆಕೆಯನ್ನು ವೆಂಟಿಲೇಟರ್ ನಲ್ಲಿ ಇಡಲಾಗಿದೆ ಎಂದು ವರದಿ ತಿಳಿಸಿದೆ.