Tuesday, May 30, 2023

Latest Posts

‘ಜೊತೆ ಜೊತೆಯಲಿ’ ಧಾರವಾಹಿ ಮುಕ್ತಾಯ; ಇನ್ಮುಂದೆ ಸಿನಿಮಾಗಳಿಗೆ ಹೆಚ್ಚು ಆದ್ಯತೆ : ಮೇಘಾ ಶೆಟ್ಟಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಝೀ ಕನ್ನಡದ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಧಾರವಾಹಿ ಮೇ 19ರಂದು ಅಂತ್ಯವಾಗುತ್ತಿದ್ದು, , ಅನು ಸಿರಿಮನೆ ಪಾತ್ರದ ಮೂಲಕ ಮನೆ ಮಾತನಾಡಿದ ದ ನಟಿ ಮೇಘಾ ಶೆಟ್ಟಿ ಇದೀಗ ಧಾರವಾಹಿ ನಿಲ್ಲುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆ ಜೊತೆಯಲಿ ಧಾರವಾಹಿ ಬಳಿಕ ಮುಂದೇನು.? ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

‘ಜೊತೆ ಜೊತೆಯಲಿ’ ಸೀರಿಯಲ್ ಮೊದಲ ಶಾಟ್ ಎದುರಿಸಿದ್ದು ನಾನೇ, ಕೊನೆಯ ಶಾಟ್ ಕೂಡ ನನ್ನದೆ. ಈ ಎರಡರ ನಡುವೆ ಸಾಕಷ್ಟು ದಿನಗಳ ಅಂತರವಿದೆ. ಯಾರೂ ಪರಿಚಯವಿಲ್ಲದೇ ಈ ತಂಡಕ್ಕೆ ಕಾಲಿಟ್ಟ ನನಗೆ ಈಗ ಈ ತಂಡ ಎರಡನೇ ಕುಟುಂಬ. ಈ ಕುಟುಂಬದೊಂದಿಗಿನ ನಂಟನ್ನು ಮುಗಿಸುತ್ತಿದ್ದೇನೆ. ನಿರ್ದೇಶಕ ಜಗದೀಶ್, ಎಪಿಸೋಡ್ ನಿರ್ದೇಶಕರು ಸೇರಿದಂತೆ ಇಡೀ ತಂಡದ ಜೊತೆ ನಾಲ್ಕು ವರ್ಷಗಳ ಕಾಲ ಒಡನಾಡಿದ್ದೇನೆ. ಅದನ್ನೆಲ್ಲವನ್ನೂ ಮರೆಯಲು ಸಾಧ್ಯವಿಲ್ಲ. ಅನು ಸಿರಿಮನೆ ನನಗೆ ಎಲ್ಲವನ್ನೂ ನೀಡಿದ್ದಾಳೆ. ನನಗೆ ಸಿಗುತ್ತಿರುವ ಸಿನಿಮಾಗಳು, ಜನರ ಪ್ರಿತಿ ಇವೆಲ್ಲದಕ್ಕೂ ಜೊತೆ ಜೊತೆಯಲಿ ಸೀರಿಯಲ್ ಮಾತ್ರ ಕಾರಣ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಮೇಘಾ ಶೆಟ್ಟಿ ಮುಂದಿನ ದಿನಗಳಲ್ಲಿ ಯಾವುದೇ ಸೀರಿಯಲ್ ನಟಿಸದಿರಲು ನಿರ್ಧರಿಸಿದ್ದಾರಂತೆ. ಇನ್ನೆನಿದ್ದರೂ ಸಿನಿಮಾಗಳತ್ತ ಮಾತ್ರ ನನ್ನ ಗಮನ. ಒಳ್ಳೊಳ್ಳೆ ಕಥೆಗಳನ್ನು ಕೇಳುತ್ತಿದ್ದೇನೆ. ಈಗ ನಟಿಸಿರುವ ‘ಕೈವ’ ಮತ್ತು ‘ಆಪರೇಷನ್ ಲಂಡನ್ ಕೆಫೆ’ ಸಿನಿಮಾ ಚೆನ್ನಾಗಿದೆ. ಈ ಎರಡೂ ಸಿನಿಮಾಗಳು ರಿಲೀಸ್‌ಗೆ ಸಿದ್ಧವಾಗಿವೆ. ಮುಂದಿನ ದಿನಗಳಲ್ಲಿ ಒಳ್ಳೆಯ ಕಥೆಗಳ ನಿರೀಕ್ಷೆಯಲ್ಲಿದ್ದೇನೆ ಎಂದು ನಟಿ ಮೇಘಾ ಶೆಟ್ಟಿ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!