ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ಮಾಜಿ ಸಚಿವೆ, ಬಿಜೆಪಿ ನಾಯಕಿ ಉಮಾಭಾರತಿ ಅವರು ಅಸ್ವಸ್ಥರಾಗಿರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ಭಾನುವಾರ ರಾತ್ರಿ ಟ್ವಿಟರ್ ನಲ್ಲಿ ತಮ್ಮ ಅನಾರೋಗ್ಯದ ವಿಚಾರ ಬಹಿರಂಗಪಡಿಸಿದ್ದಾರೆ.
ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ, ‘ಏಕಾಏಕಿ ನಾನು ಅಸ್ವಸ್ಥಳಾಗಿದ್ದು, ಸ್ಮಾರ್ಟ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ನಾನು ಈಗ ಸುಧಾರಿಸಿಕೊಂಡಿದ್ದೇನೆ. ಆದರೆ ನನಗೆ ಹಲವು ತಿಂಗಳ ವಿಶ್ರಾಂತಿ ಸೂಚಿಸಲಾಗಿದೆ’ ಎಂದು ಉಮಾ ಟ್ವೀಟ್ ಮಾಡಿದ್ದಾರೆ. ಇದಲ್ಲದೇ, ‘55 ವರ್ಷ ನಾನು ಜನಸೇವೆ ಮಾಡಿದ್ದೇನೆ. ನನ್ನನ್ನು ಮರೆಯಬೇಡಿ’ ಎಂದು ಜನತೆಗೆ ಕೋರಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ನನ್ನ ಕುಟುಂಬದ ಸದಸ್ಯೆ, ಗೌರವಾನ್ವಿತ ಉಮಾಭಾರತಿ ಅವರು ಅಸ್ವಸ್ಥರಾಗಿದ್ದಾರೆ ಎಂದು ತಿಳಿಯಿತು. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲು ನಾನು ದೇವರನ್ನು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಮತ್ತು ಬಿಜೆಪಿ ನಾಯಕ ಸಿಂಧಿಯಾ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.