ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಗೆ ಇಬ್ಬರು ಮೃತಪಟ್ಟಿದ್ದು, ಅಂಡರ್ಪಾಸ್ನಲ್ಲಿ ಕಾರ್ಒಂದು ಸಿಲುಕಿಕೊಂಡಿದ್ದು, ನೀರು ತುಂಬಿ ಟೆಕ್ಕಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 45 ನಿಮಿಷ ಸುರಿದ ಭಾರೀ ಮಳೆಗೆ ಮನೆಯೊಳಗೆ ನೀರು, ಕಂಬಗಳು ಉರುಳಿದ್ದು, ಕಾರ್ ಮೇಲೆ ಮರ ಉರುಳಿದ್ದು, ತೆರವು ಕಾರ್ಯ ವಿಳಂಬ ಹೀಗೆ ಸಾಕಷ್ಟು ಸಮಸ್ಯೆಗಳು ಎದುರಾಗಿವೆ.
ಹೀಗಾಗಿ ಬಿಬಿಎಂಪಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ನಗರದ ಎಲ್ಲಾ ಅಂಡರ್ಪಾಸ್ಗಳ ಸರ್ವೆ ನಡೆಸುತ್ತಿದೆ. ಡ್ರೈನೇಜ್ ಇಲ್ಲದ ಅಂಡರ್ಪಾಸ್ಗಳನ್ನು ಬಂದ್ ಮಾಡಲಾಗುವುದು, ರಿಪೇರಿ ನಂತರವೇ ಅವುಗಳನ್ನು ಸಂಚಾರಕ್ಕೆ ಮುಕ್ತ ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.