ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಲೋಕಸೇವಾ ಆಯೋಗವು 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿದ್ದು, ದೇಶದಾದ್ಯಂತ ಒಟ್ಟು 933 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮೊದಲ 4 ರ್ಯಾಂಕ್ ಗಳನ್ನು ಮಹಿಳಾ ಅಭ್ಯರ್ಥಿಗಳೇ ಪಡೆದುಕೊಂಡಿದ್ದಾರೆ. ಇಶಿತಾ ಕಿಶೋರ್ ಯುಪಿಎಸ್ ಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಸ್ಥಾನ ಗರಿಮಾ ಲೋಹಿಯಾ, ಮೂರನೇ ಸ್ಥಾನವನ್ನು ಉಮಾ ಹರತಿ ಎನ್ ಮತ್ತು ನಾಲ್ಕನೇ ಸ್ಥಾನವನ್ನು ಸ್ಮೃತಿ ಮಿಶ್ರಾ ಪಡೆದುಕೊಂಡಿದ್ದಾರೆ.
ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್ಸೈಟ್ upsc.gov.in. ನಲ್ಲಿ ಪರಿಶೀಲಿಸಬಹುದು.