ಬೆಂಕಿ ಅನಾಹುತ: ಪೋಟೋ ಸ್ಟುಡಿಯೋ ಸಂಪೂರ್ಣ ಭಸ್ಮ

ಹೊಸ ದಿಗಂತ ವರದಿ, ಅಂಕೋಲಾ:

ಬೆಂಕಿ ಅನಾಹುತ ಸಂಭವಿಸಿ ಪೋಟೋ ಸ್ಟುಡಿಯೋ ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಪಟ್ಟಣದ ಮುಖ್ಯ ರಸ್ತೆಯ
ಅರ್ಬನ್ ಬ್ಯಾಂಕ್ ಎದುರಿನ ಕಟ್ಟಡದಲ್ಲಿ ಶುಕ್ರವಾರ ಮಧ್ಯರಾತ್ರಿ ನಂತರ ಸಂಭವಿಸಿದೆ.

ಅಗ್ರಗೋಣ ಮೂಲದ ಸಂತೋಷ ಎನ್ನುವವರಿಗೆ ಸೇರಿದ್ದ ಸ್ಟುಡಿಯೋ ದ್ವಾರದ ಕೆಳಗಿನಿಂದ ಹೊಗೆ ಬರುವುದನ್ನು ಗಮನಿಸಿದ ಕೆಲವರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದು , ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಟುಡಿಯೋ ಶಟರ್ ಮುರಿದು ಬೆಂಕಿ ಆರಿಸುವ ಕೆಲಸ ಮಾಡಿದ್ದಾರೆ.

ಕಟ್ಟಡದ ಮೇಲ್ಮಹಡಿ ಮತ್ತು ಅಕ್ಕ ಪಕ್ಕದಲ್ಲಿ ಹಲವಾರು ಅಂಗಡಿಗಳಿದ್ದು ಬೆಂಕಿ ಜ್ವಾಲೆ ವ್ಯಾಪಿಸಿದರೆ ಭಾರೀ ಪ್ರಮಾಣದಲ್ಲಿ ನಷ್ಟ ಸಂಭವಿಸುವ ಸಾಧ್ಯತೆ ಇತ್ತು. ಸ್ಥಳೀಯ ಕೆಲವು ಯುವಕರು ಸಹ ಸಾಹಸ ತೋರಿ ಬೆಂಕಿ ತಗುಲಿದ ಕಟ್ಟಡದ ಮೇಲ್ಮಹಡಿ ಏರಿ ಹೆಚ್ಚಿನ ಅವಘಡ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು.

ಬೆಂಕಿ ತಗುಲಿ ಸ್ಟುಡಿಯೋದಲ್ಲಿ ಇದ್ದ ಪರಿಕರಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಹೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಗ್ನಿ ಅವಘಡಕ್ಕೆ ನಿಖರ ಕಾರಣಗಳು ತಿಳಿದು ಬರಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!