ದೇಶಾದ್ಯಂತ ನಾಳೆಯಿಂದ 75 ರೂ. ನಾಣ್ಯ ಚಲಾವಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮೇ 28ರಂದು 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ದೇಶಾದ್ಯಂತ ಬಿಡುಗಡೆ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಹೊಸ ಸಂಸತ್ ಕಟ್ಟಡ ಉದ್ಘಾಟಿಸುವ ಗೌರವ ಸೂಚಕವಾಗಿ ಹೊಸ ನಾಣ್ಯವನ್ನು ಸರ್ಕಾರ ಬಿಡುಗಡೆ ಮಾಡಲಿದೆ.

ಈ ಬಗ್ಗೆ ಆರ್ಥಿಕ ವ್ಯವಹಾರಗಳ ಇಲಾಖೆ ಅಧಿಕೃತ ಗೆಜೆಟ್ ಹೊರಡಿಸಿದೆ.

ಈ ಹೊಸ ನಾಣ್ಯದ ತೂಕ ಸುಮಾರು 35 ಗ್ರಾಂ ಆಗಿದ್ದು, ನಾಣ್ಯದಲ್ಲಿ ಅಶೋಕ ಚಕ್ರ ಸಿಂಹವಿದೆ, ಮಧ್ಯದಲ್ಲಿ ದೇವನಾಗರಿ ಲಿಪಿಯಲ್ಲಿ ಭರತ್ ಹೆಸರು ಮತ್ತು ಇಂಗ್ಲಿಷ್ ನಲ್ಲಿ ಇಂಡಿಯಾ ಪದ ಬರೆಯಲಾಗಿದೆ. ಇನ್ನು ರೂಪಾಯಿ ಚಿಹ್ನೆ ಮತ್ತು ಈ ನಾಣ್ಯದ ವಿನಿಮಯ ಮೌಲ್ಯವು 75 ರೂ. ಇನ್ನೊಂದು ಬದಿಯಲ್ಲಿ ಹೊಸ ಸಂಸತ್ ಭವನದ ಆವರಣದ ಪ್ರತಿಮೆ ಇದ್ದು, ಕೆಳಭಾಗದಲ್ಲಿ 2023 ಎನ್ನುವ ಅಂಕಿಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!