ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಈ ಮಧ್ಯೆ ಸಿಎಸ್ಕೆ ಫ್ಯಾನ್ಸ್ಗೆ ಮಹೇಂದ್ರ ಸಿಂಗ್ ಧೋನಿ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಈ ಹಿಂದೆಯೇ ನಿವೃತ್ತಿ ಬಗ್ಗೆ ಧೋನಿ ಮಾತನಾಡಿದ್ದರು, ಆದರೆ ಸ್ಪಷ್ಟವಾಗಿ ಹೇಳಿರಲಿಲ್ಲ. ಇದೀಗ ಧೋನಿ ಈ ಬಗ್ಗೆ ಮಾತನಾಡಿದ್ದು, ನಿವೃತ್ತಿ ಘೋಷಿಸೋಕೆ ಇದು ಬೆಸ್ಟ್ ಟೈಮ್. ನನ್ನ ಮೇಲೆ ಪ್ರೀತಿ ಇಟ್ಟ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ದೇಹ ಸಪೋರ್ಟ್ ಮಾಡುತ್ತಿಲ್ಲ. ನಾನು ಫೀಲ್ಡ್ಗೆ ಬಂದಾಗ ಎಲ್ಲರೂ ಧೋನಿ ಧೋನಿ ಎಂದು ಕೂಗುತ್ತಿದ್ದರು. ನನ್ನ ಕಣ್ಣಂಚು ಒದ್ದೆಯಾಗಿತ್ತು. ಬ್ಯಾಟಿಂಗ್ ಮಾಡಲು ಸಾಕಷ್ಟು ಸಮಯ ಬೇಕಾಯ್ತು ಎಂದು ಧೋನಿ ಹೇಳಿಕೊಂಡಿದ್ದಾರೆ.