Monday, October 2, 2023

Latest Posts

VIRAL VIDEO| ಲಂಚ್‌ @ ಟ್ರಾಫಿಕ್‌ ಜಾಮ್, ಸಾಮಾಜಿಕ ಮಾಧ್ಯಮದಲ್ಲಿ ಇದರದ್ದೇ ಮಾತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದ ಮೆಟ್ರೋ ನಗರಗಳಾದ ದೆಹಲಿ, ಕೋಲ್ಕತ್ತಾ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ. ಆದರೆ ಸಾಮಾನ್ಯವಾಗಿ ಟ್ರಾಫಿಕ್ ಜಾಮ್ ಆದಾಗ ಏನ್‌ ಮಾಡೋದು ಸ್ವಲ್ಪ ಹೊತ್ತು ಕಾಯುತ್ತೇವೆ ಅಥವಾ.. ಹಾಡುಗಳನ್ನು ಕೇಳುತ್ತಲೇ ಇರುತ್ತೇವೆ.. ತಾಳ್ಮೆ ಇಲ್ಲದಿದ್ದರೆ ಟ್ರಾಫಿಕ್ ಜಾಮ್ ಎಂದು ಸರ್ಕಾರವನ್ನು ಬೈಯುತ್ತೇವೆ. ಆದರೆ ಕೆಲವರು ತುಂಬಾ ಜಾಣತನದಿಂದ ಯೋಚಿಸುತ್ತಾರೆ ಮತ್ತು ಟ್ರಾಫಿಕ್ ಜಾಮ್ ಸಮಯವನ್ನು ಸಹ ಬಳಸಿಕೊಳ್ತಾರೆ.

ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದ ಬಸ್ ಚಾಲಕನೊಬ್ಬ ಊಟವನ್ನೇ ಮುಗಿಸಿದ್ದಾರೆ. ಟ್ರಾಫಿಕ್ ಜಾಮ್ ತೆರವಾಗಲು ತುಂಬಾ ಸಮಯ ಹಿಡಿದಿದ್ದರಿಂದ ಬಸ್ ಡ್ರೈವರ್ ತನ್ನ ಊಟದ ಡಬ್ಬಿಯನ್ನು ತೆಗೆದು ಊಟ ಮಾಡಿದ್ದಾರೆ. ನಂತರ ಶಾಂತವಾಗಿ ನೀರು ಕುಡಿದು ತನ್ನ ಕೆಲಸಕ್ಕೆ ಮರಳಿದನು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!