ಪಾಕಿಸ್ತಾನದಲ್ಲಿ ತೀವ್ರವಾದ ಆಹಾರ ಬಿಕ್ಕಟ್ಟು: ವಿಶ್ವಸಂಸ್ಥೆ ಕಳವಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯಿಂದ ತತ್ತರಿಸುತ್ತಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್, ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಬಂಡಾಯವೆದ್ದಿದ್ದಾರೆ. ಇದೇ ವೇಳೆ ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾದಲ್ಲಿ ಪ್ರತ್ಯೇಕತಾವಾದ ಹೆಚ್ಚಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಪಾಕಿಸ್ತಾನ ಅತಂತ್ರವಾಗಿದೆ.

ಏತನ್ಮಧ್ಯೆ, ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲಿ ಆಹಾರ ಬಿಕ್ಕಟ್ಟು ಉಲ್ಬಣಗೊಳ್ಳಲಿದೆ ಎಂದು ವಿಶ್ವಸಂಸ್ಥೆಯ ವರದಿ ಬಹಿರಂಗಪಡಿಸಿದೆ. ದೇಶದಲ್ಲಿ ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆ ತೀವ್ರಗೊಂಡರೆ ಮುಂಬರುವ ತಿಂಗಳುಗಳಲ್ಲಿ ಪಾಕಿಸ್ತಾನವು ತೀವ್ರ ಆಹಾರ ಅಭದ್ರತೆಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವ ಆಹಾರ ಕಾರ್ಯಕ್ರಮ (WFP) ಜಂಟಿಯಾಗಿ ಈ ವರದಿಯನ್ನು ಬಿಡುಗಡೆ ಮಾಡಿದೆ.

ಪ್ರಸ್ತುತ ಆರ್ಥಿಕ ಹಿಂಜರಿತದ ನಡುವೆ ಹೆಚ್ಚುತ್ತಿರುವ ಸಾಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯು ದೀರ್ಘಾವಧಿಯ ಆರ್ಥಿಕ ಬಿಕ್ಕಟ್ಟನ್ನು ಉಲ್ಬಣಗೊಳಿಸಿದೆ ಎಂದು ವರದಿ ಹೇಳಿದೆ. ಏಪ್ರಿಲ್ 2023 ಮತ್ತು ಜೂನ್ 2026 ರ ನಡುವೆ ಪಾಕಿಸ್ತಾನ ಸರ್ಕಾರವು $ 77.5 ಶತಕೋಟಿ ಸಾಲವನ್ನು ಪಾವತಿಸಬೇಕಾಗಿದೆ. ಮತ್ತೊಂದೆಡೆ, ಐಎಂಎಫ್‌ನಿಂದ ಪ್ಯಾಕೇಜ್ ಪಡೆಯುವ ಪಾಕಿಸ್ತಾನದ ಪ್ರಯತ್ನಗಳಿಗೆ ರಾಜಕೀಯ ಅಸ್ಥಿರತೆ ಮತ್ತಷ್ಟು ಅಡ್ಡಿಯಾಗುತ್ತಿದೆ. ವಿದೇಶಿ ಮೀಸಲು ಕೊರತೆ, ಸವಕಳಿಯ ಕರೆನ್ಸಿ ದೇಶದ ಪ್ರಮುಖ ಆಹಾರ ಮತ್ತು ಇಂಧನವನ್ನು ಆಮದು ಮಾಡಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

ಜೂನ್ ನಿಂದ ನವೆಂಬರ್ 2023 ರವರೆಗೆ, 22 ದೇಶಗಳಲ್ಲಿ ತೀವ್ರ ಆಹಾರ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪಾಕಿಸ್ತಾನದ ಜೊತೆಗೆ ಅಫ್ಘಾನಿಸ್ತಾನ, ನೈಜೀರಿಯಾ, ಸೊಮಾಲಿಯಾ, ದಕ್ಷಿಣ ಸುಡಾನ್, ಯೆಮೆನ್, ಹೈಟಿ, ಬುರ್ಕಿನಾ ಫಾಸೊ, ಮಾಲಿ, ಮಧ್ಯ ಆಫ್ರಿಕಾ ಗಣರಾಜ್ಯ, ಇಥಿಯೋಪಿಯಾ, ಕೀನ್ಯಾ, ಕಾಂಗೋ, ಸಿರಿಯಾ, ಮ್ಯಾನ್ಮಾರ್ ಈ ಪಟ್ಟಿಯಲ್ಲಿ ಸೇರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!