ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಯಕಿ ಅನುಪಮಾ ಪರಮೇಶ್ವರನ್ ಬಗ್ಗೆ ಹೇಳಬೇಕಿಲ್ಲ..ಸಿನಿಮಾ ಮಾಡುತ್ತಲೇ ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.. ಈಕೆಯ ಕ್ಯೂಟ್ ನೆಸ್‌ಗೆ ಮಾರು ಹೋಗದವರಿಲ್ಲ. ಇದ್ದಕ್ಕಿದ್ದಂತೆ ಈಕೆ ಹಾಕಿದ ಪೋಸ್ಟ್ ಅಭಿಮಾನಿಗಳ ಹೃದಯವನ್ನು ಕಲಕಿದೆ.
ಹೀರೋಯಿನ್‌ಗಳು ಚೇಷ್ಟೆಯ ಪೋಸ್ಟ್‌ಗಳನ್ನು ಹಾಕುವುದು ಸಹಜ. ಕೆಲವೊಮ್ಮೆ ಕೀಟಲೆ ಮಾಡಲು ಕೆಲವು ಸಂದರ್ಭಗಳಲ್ಲಿ ಸುಳ್ಳು ಪ್ರಚಾರ ಕೂಡ ಮಾಡಲಾಗುತ್ತದೆ. ಇದೀಗ ಅನುಪಮಾ ಕೂಡ ಅಂಥದ್ದೇ ಶಾಕ್ ಕೊಟ್ಟಿದ್ದಾರೆ. ತಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ ಎಂದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಬೆರಳಿಗೆ ಪ್ಲಾಸ್ಟಿಕ್ ಕವರ್ ಸುತ್ತಿ ಎಂಗೇಜ್ ಮೆಂಟ್ ರಿಂಗ್ ಎಂದು ಹೇಳಿದ್ದರು.
ಆದರೆ, ಅದು ನಿಜವಲ್ಲ ಎಂದು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಕಾರ್ತಿಕೇಯ 2 ಭಾರೀ ಹಿಟ್ ಆಗಿದ್ದರಿಂದ ಅನುಪಮಾ ಮತ್ತೆ ಫಾರ್ಮ್‌ಗೆ ಬಂದರು. ಅನುಪಮಾ ಬಟರ್‌ಫ್ಲೈ ಟೈಟಲ್‌ನಲ್ಲಿ ಒಟಿಟಿ ಸಿನಿಮಾ ಮಾಡಿದ್ದಾರೆ. ಅದೂ ನಿರಾಸೆ ತಂದಿದೆ. ಸದ್ಯ ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ.