ಮದುವೆ ದಿನವೇ ಬಾಯ್‌ಫ್ರೆಂಡ್ ಜೊತೆ ವಧು ಎಸ್ಕೇಪ್, ಆಕೆಗಾಗಿ 13 ದಿನ ಮಂಟಪದಲ್ಲೇ ಕಾದ ವರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನದಲ್ಲಿ ಮದುವೆಯ ದಿನವೇ ವಧು ಬಾಯ್‌ಫ್ರೆಂಡ್ ಜೊತೆ ಓಡಿಹೋಗಿದ್ದಾಳೆ. ಮದುವೆಯ ಎಲ್ಲ ತಯಾರಿಯಲ್ಲಿ ಜೊತೆಗಿದ್ದು, ಮದುವೆಯ ದಿನ ವಾಕರಿಕೆ ಬರುವಂತೆ ಆಗುತ್ತಿದೆ ಎಂದು ಬಾತ್‌ರೂಂಗೆ ಹೋಗಿದ್ದು, ಎಷ್ಟು ಹೊತ್ತಾದರೂ ಆಕೆ ಬರಲೇ ಇಲ್ಲ. ಇದರಿಂದ ಮನೆಯವರು ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ತದನಂತರ ಆಕೆ ಓಡಿಹೋಗಿರುವ ವಿಷಯ ಬೆಳಕಿಗೆ ಬಂದಿದೆ.

ಈ ವಿಷಯ ವರನಿಗೆ ತಿಳಿದಿದ್ದು, ಆತ ನಾನು ಆಕೆಯನ್ನೇ ಮದುವೆಯಾಗುತ್ತೇನೆ ಎಂದು ಪಟ್ಟು ಹಿಡಿದು ಕುಳಿತಿದ್ದು, ಹಸೆಮಣೆಯನ್ನೂ ಬಿಡಲು ತಯಾರಿರಲಿಲ್ಲ.13 ದಿನಗಳ ವರೆಗೆ ವಧುವಿನ ಮನೆಯಲ್ಲೇ ಬೀಡುಬಿಟ್ಟು, ವಧುವನ್ನು ಹುಡುಕಿ ಆಕೆಯನ್ನು ಕರೆದುಕೊಂಡುಬಂದಿದ್ದಾನೆ.

ವಿಶೇಷ ಎಂದರೆ ವರನೇ ವಧುವನ್ನು ಮದುವೆ ಮಾಡಿಕೊಂಡು ಕರೆದುಕೊಂಡು ಬಂದಿದ್ದು, ವಧುವಿನ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!