ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಟ ಪಟ ಅಂತ ದಿನವಿಡೀ ಮಾತನಾಡೋರಿಗೆ ಈ ಸುದ್ದಿ ಇಷ್ಟವಾಗದೇ ಇರಬಹುದು, ಮಾತಿಗಿಂತ ಮೌನ ಚೆಂದ ಅನ್ನೋ ಮಾತೇ ಇಲ್ವಾ? ಯಾವಾಗಲೂ ಸುಮ್ಮನೆ ಇರಿ ಅಂತ ಹೇಳೋಕಾಗತ್ತಾ? ದಿನದಲ್ಲಿ ಯಾವುದೋ ಒಂದು ಸಮಯದಲ್ಲಿ ಸ್ವಲ್ಪ ನಿಶ್ಯಬ್ದವಾಗಿದ್ದರೆ ಸಾಕಷ್ಟು ಲಾಭ ಇದೆ, ಯಾವ ಲಾಭ ನೋಡಿ..
- ಹೈ ಬಿಪಿ ಇರೋರಿಗೆ ಇದು ರಾಮಬಾಣ
- ಫೋಕಸ್ ಹಾಗೂ ಏಕಾಗ್ರತೆ ಹೆಚ್ಚಾಗುತ್ತದೆ
- ಓಡುವ ಆಲೋಚನೆಗಳಿಗೆ ಕಡಿವಾಣ ಹಾಕಬಹುದು
- ಮೆದುಳಿನ ಬೆಳವಣಿಗೆಗೆ ಸಮಯ ಸಿಗುತ್ತದೆ
- ಕ್ರಿಯಾತ್ಮಕ ವ್ಯಕ್ತಿಗಳು ನೀವಾಗುತ್ತೀರಿ
- ನಿದ್ದೆ ಬರೋದಿಲ್ಲ ಅನ್ನೋ ಸಮಸ್ಯೆ ಓಡಿಸಬಹುದು
- ತುಂಬಿದ ಕೊಡ ತುಳುಕೋದಿಲ್ಲ ಅನ್ನೋ ಮಾತಿದೆಯಲ್ಲಾ, ಆ ರೀತಿ ನೀವು ಇರುತ್ತೀರಿ.
- ಹೆಚ್ಚು ಮಾತನಾಡೋರಿಗಿಂತ ಮೌನವಾಗಿರೋರನ್ನು ಜನ ನಂಬುತ್ತಾರೆ.
- ಮಾತೇ ಆಡದವರು ಎಲ್ಲೋ ಒಮ್ಮೊಮ್ಮೆ ಮಾತನಾಡಿದಾಗ ಅವರ ಮಾತಿಗೆ ಬೆಲೆ ಇರುತ್ತದೆ.
- ಮಾತನಾಡಬಾರದನ್ನು ಮಾತನಾಡಿ ಅಯ್ಯೋ ಹೇಳಬಾರದಿತ್ತು ಅಂದುಕೊಳ್ಳೋಕಿಂತ ಮಾತನಾಡದೇ
- ಇರೋದು ಬೆಸ್ಟ್
- ಮನಶಾಂತಿ ಹೆಚ್ಚುತ್ತದೆ