ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಒಂದೆಡೆ ತಯಾರಿ ನಡೆಯುತ್ತಿದ್ದು, ಜೂನ್ 7 ರಿಂದ ಲಂಡನ್ ನ ಓವಲ್ ಮೈದಾನದಲ್ಲಿ ಟೆಸ್ಟ್ ಫೈನಲ್ ಪಂದ್ಯ ಆರಂಭಗೊಳ್ಳುತ್ತಿದೆ.
ಇದೀಗ ಪಂದ್ಯ ಆರಂಭಕ್ಕೆ ಇನ್ನೆರಡು ದಿನ ಬಾಕಿ ಇರುವಾಗಲೇ ಆಸ್ಟ್ರೇಲಿಯಾ ತಂಡಕ್ಕೆ ಹಿನ್ನಡೆಯಾಗಿದೆ. ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗಿ ಜೋಶ್ ಹೇಜಲ್ವುಡ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಗಾಯದ ಸಮಸ್ಯೆಯಿಂದ ಹೇಜಲ್ವುಡ್ ಟೆಸ್ಟ್ ಟಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಲಭ್ಯರಿಲ್ಲ.
ಜೋಶ್ ಹೇಜಲ್ವುಡ್ ಅಲಭ್ಯರಾಗಿರುವ ಕಾರಣ ಈ ಸ್ಥಾನಕ್ಕೆ ಮಿಚೆಲ್ ನಾಸೀರ್ ಆಯ್ಕೆಯಾಗಿದ್ದಾರೆ. 33 ವರ್ಷದ ನಾಸೀರ್ ಆಸ್ಟ್ರೇಲಿಯಾ ಪರ 2 ಟೆಸ್ಟ್ ಪಂದ್ಯ ಆಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೀಷ್ ಕಂಟ್ರಿ ಚಾಂಪಿಯನ್ಶಿಪ್ ಟೂರ್ನಿಯಲ್ಲಿ 5 ಪಂದ್ಯದಿಂದ 19 ವಿಕೆಟ್ ಕಬಳಿಸಿದ್ದರು.
ಜೋಶ್ ಹೇಜಲ್ವುಡ್ ಕಳೆದೆರಡು ತಿಂಗಳಿನಿಂದ ಗಾಯದ ನೋವಿನಿಂದ ಬಳಲುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ವೇಗಿಯಾಗಿದ್ದ ಹೇಜಲ್ವುಡ್, ಗಾಯ ತೀವ್ರಗೊಂಡ ಕಾರಣ ಐಪಿಎಲ್ ತೊರೆದು ತವರಿಗೆ ವಾಪಾಸ್ಸಾಗಿದ್ದರು.