SHOCKING | ಅಂಕೋಲಾದ ಅಂಗಡಿ ಮುಂಭಾಗ ಪಾಕಿಸ್ತಾನ ಉಲ್ಲೇಖಿತ ಪೋಸ್ಟರ್ ಪತ್ತೆ

ಹೊಸದಿಗಂತ ವರದಿ, ಅಂಕೋಲಾ:

ಪಟ್ಟಣದ ಬಂಡಿಬಾಜಾರ ರಸ್ತೆಯಲ್ಲಿ ಇರುವ ಅಂಗಡಿ ಕಟ್ಟಡವೊಂದರ ಮೇಲೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವಿಚಿತ್ರವಾಗಿ ಕೈಬರಹದಲ್ಲಿ ಬರೆದ ಬಿತ್ತಿಪತ್ರಗಳು ಕಂಡು ಬಂದಿದ್ದು ವಿಚಿತ್ರ ಬರವಣಿಗೆ ಹೊಂದಿರುವ ಕೆಲವರು ಆ ಕುರಿತು ಗಮನ ಹರಿಸುತ್ತಿದ್ದಂತೆ ಈ ಬಿತ್ತಿಪತ್ರಗಳನ್ನು
ಕಿತ್ತು ಹಾಕಿರುವುದು ಹಲವು ರೀತಿಯ ಸಂಶಯಗಳಿಗೆ ಕಾರಣವಾಗಿದೆ.

ಬಿಳಿ ಬಣ್ಣದ ಹಾಳೆ ಮೇಲೆ ಕೆಂಪು ಬಣ್ಣದ ಮಾರ್ಕರ್ ಪೆನ್ನಿನಿಂದ ಬರೆದಂತಿರುವ ಮೂರು ಪ್ರತ್ಯೇಕ ಪೋಸ್ಟರ್ ಗಳನ್ನು ಅಂಟಿಸಿಲಾಗಿತ್ತು
ಆದರೆ ಅದರಲ್ಲಿ ಇರುವ ಬರವಣಿಗೆ ಮಾತ್ರ ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಡುವಂತಿದೆ.

ಏನಿದು ಪೋಸ್ಟರ್
ಒಟ್ಟು ಮೂರು ಪ್ರತ್ಯೇಕ ಪೋಸ್ಟರ್ ಕಂಡು ಬಂದಿದ್ದು ಮೊದಲ ಪೋಸ್ಟರಿನಲ್ಲಿ ಸಂಗ್ಲಾನಿ ವೆಲಫರ್ ಟ್ರಸ್ಟ್ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ತಲೆಬರಹ ಬರೆಯಲಾಗಿದ್ದು, ಕೆಳಗಡೆ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಜೈಹಿಂದ್ ಹೈಸ್ಕೂಲ್, ಪಿ.ಎಂ.ಹೈಸ್ಕೂಲ್, ಕೆನರಾ ವೆಲಫರ್ ಟ್ರಸ್ಟ್ ಮತ್ತು ಕೆ.ಎಲ್. ಇ ಕಾಲೇಜುಗಳ ಹೆಸರು,ಪೊಲೀಸ್ ಮತ್ತು ಫಾರೆಸ್ಟ ಇಲಾಖೆ ಹೆಸರು ಕಾಣಬಹುದು.

ಜೈಹಿಂದ್ ಹೈಸ್ಕೂಲ್ ಸ್ಟೂಡೆಂಟ್ಸ್ ಗೆ ಎವಿಲ್ ಮಾಡಿ, ಪಿ.ಎಂ.ಹೈಸ್ಕೂಲ್ ಸ್ಟೂಡೆಂಟ್ಸ್ ಗೆ ಮೇಲೆ ತೆಗೆದು ಕೆನರಾ ವೆಲಫರ್ ಟ್ರಸ್ಟ್ ಮತ್ತು ಕೆ.ಎಲ್. ಇ ಕಾಲೇಜು ಉರ್ದು ವೆಲಫರ್ ಟ್ರಸ್ಟಿನಿಂದ ಹಣ ಕಮಾಯಿಸಿ ಎಂದು ಚಿತ್ರ ವಿಚಿತ್ರವಾಗಿ ಬರೆಯಲಾಗಿದೆ.
ಮುಂದುವರೆದು ಇಂಡಿಯಾ ಫಾರೆಸ್ಟ ಮಾರಿದ್ದಾರೆ, 20 ವರ್ಷಗಳಲ್ಲಿ ಎಲ್ಲಾ ಬೆಟ್ಟ ನೆಲಸಮವಾಗುತ್ತದೆ,ಎಲ್ಲರ ಜಾಗ ಸಿಗುತ್ತದೆ ಎಂದು ಬರೆಯಲಾಗಿದೆ.

ಎರಡನೇ ಪೋಸ್ಟರ್ ಕೆಳ ಭಾಗ ಬಹುತೇಕ ಅಳಸಿ ಹೋಗಿದ್ದು ಮೇಲ್ಬಾಗದಲ್ಲಿ ಎವಿಲ್ ಐಟಮ್ಸ ಎಂದು ತಲೆಬರಹ ನೀಡಲಾಗಿದ್ದು ಒಂದು ಧರ್ಮದ ಪವಿತ್ರ ಸ್ಥಳ, ಪ್ರಾರ್ಥನಾ ಮಂದಿರಗಳ ಹೆಸರು ಬರೆಯಲಾಗಿದೆ.

ಮೂರನೇ ಪೋಸ್ಟರಿನಲ್ಲಿ ಸಂಗ್ಲಾನಿ ವೆಲಫರ್ ಟ್ರಸ್ಟ್ ಹೆಸರು ತಲೆಬರಹ ನೀಡಲಾಗಿದ್ದು ಶಿಕ್ಷಣ ಸಂಸ್ಥೆಗಳು, ಟ್ರಸ್ಟ್ ಗಳು, ಚೈನ್ ಮಾರ್ಕೆಟ್ ಕಂಪನಿ ಹೆಸರುಗಳು ಕಾಣಬಹುದಾಗಿದ್ದು 5000 ಹುಡುಗ ಹುಡುಗಿಯರು, ವಿಶ್ವ ಸುಂದರಿ ಫಿಲ್ಮ್, 100 ಲಕ್ಷ ಬಿಲಿಯನ್ ಡಾಲರ್ ಆದಾಯ ಬರುತ್ತದೆ ಎಲ್ಲರೂ ಬ್ಯಾಂಕ್ ಖಾತೆ ತೆರೆಯಿರಿ ಹೀಗೆ ಇಂಗ್ಲಿಷ್ ನಲ್ಲಿ ಬರೆದು ಕೆಳಗಡೆ ಶೇಖ್ ಖಾದ್ರಿ ಎಂಬ ಹೆಸರು ಬರೆಯಲಾಗಿದೆ.
ಈ ಪೋಸ್ಟರ್ ಗಳು ಎಷ್ಟು ದಿನಗಳಿಂದ ಇದ್ದವು ಎನ್ನುವುದರ ಕುರಿತು ಯಾವುದೇ ಮಾಹಿತಿ ಇಲ್ಲವಾದರೂ ಶನಿವಾರ ಕೆಲವರು ಪೋಟೋ ತೆಗೆದ ನಂತರ ಈ ಪೋಸ್ಟರ್ ಆ ಸ್ಥಳದಿಂದ ತೆಗೆಯಲಾಗಿದೆ.

ಯಾರ ಕೃತ್ಯ?
ಪೋಸ್ಟರ್ ಬರಹಗಳು ತುಂಬಾ ವಿಚಿತ್ರವಾಗಿದ್ದು ಯಾರೋ ಮಾನಸಿಕ ಅಸ್ವಸ್ಥರು ಬರೆದು ಅಂಟಿಸಿದಂತೆ ಮೇಲ್ನೋಟಕ್ಕೆ ಕಂಡು ಬಂದರೂ ಪಾಕಿಸ್ತಾನದ ಕಾಂಟ್ರಾಕ್ಟ್ ಎಂದು ಬರೆದಿರುವುದು ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳ ಹೆಸರು ಉಲ್ಲೇಖಿಸಿರುವುದು ಸಂಶಯಗಳಿಗೆ ಕಾರಣವಾಗಿದೆ, ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುವುದರಿಂದ ಸ್ಥಳೀಯರ ಕೃತ್ಯ ಆಗಿರುವ ಸಾಧ್ಯತೆ ಇದ್ದು.

ಇದರ ಹಿಂದೆ ಯಾರಿದ್ದಾರೆ?
ಯಾವ ಉದ್ದೇಶದಿಂದ ಈ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು? ಎನ್ನುವ ಕುರಿತು ಕೂಲಂಕುಷ ತನಿಖೆ ನಡೆಸಬೇಕಾದ ಅಗತ್ಯತೆ ಇದೆ.
ಸಂಗ್ಲಾನಿ ವೆಲಫರ್ ಟ್ರಸ್ಟ್ ಮಾಹಿತಿ ಪೋಸ್ಟರ್ ನಲ್ಲಿ ಬರೆಯಲಾಗಿರುವ ಸಂಗ್ಲಾನಿ ವೆಲಫರ್ ಟ್ರಸ್ಟ್ ಕುರಿತು ಯಾವುದೇ ಮಾಹಿತಿ ಲಭ್ಯವಾಗದಿದ್ದರೂ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸಂಗ್ಲಾನಿ ಎಂಬ ಹಳ್ಳಿ ಇರುವ ಕುರಿತು ಮಾಹಿತಿ ಗೂಗಲ್ ನಲ್ಲಿ ಸಿಗುತ್ತದೆ.
ಅಲ್ಲಿನ ಸಂಗ್ಲಾನಿಗೂ ಪೋಸ್ಟರಿನಲ್ಲಿ ಬರೆದಿರುವ ಸಂಗ್ಲಾನಿ ವೆಲಫರ್ ಟ್ರಸ್ಟ್ ಗೂ ಏನಾದರೂ ಸಂಬಂಧ ಇದೆಯೋ ಅಥವಾ ಇದು ಬೇರೆ ಯಾವ ಸಂಗ್ಲಾನಿ ವೆಲಫರ್ ಟ್ರಸ್ಟ್ ಅದಕ್ಕೂ ಅಂಕೋಲಾದಲ್ಲಿ ಪೋಸ್ಟರ್ ಅಂಟಿಸಿದವರಿಗೂ ಸಂಬಂಧ ಇದೆಯೋ ಎನ್ನುವ ಕುರಿತು ವಿಚಾರಣೆ ನಡೆಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!