ಕ್ರಿಕೆಟ್‌ ಬಾಲ್‌ ಮುಟ್ಟಿದ್ದಕ್ಕೆ ದಲಿತನ ಹೆಬ್ಬೆರಳು ಕತ್ತರಿಸಿದ ಕಿರಾತಕರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕ್ರಿಕೆಟ್‌ ಆಡುವ ವೇಳೆ ಬಾಲ್‌ ಮುಟ್ಟಿದ ಕಾರಣ ದಲಿತ ವ್ಯಕ್ತಿಯೊಬ್ಬನ ಹೆಬ್ಬೆರಳು ಕತ್ತರಿಸಿದ ಘಟನೆ ಗುಜರಾತ್‌ನ ಪಟಾನ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಕಾಕೋಶಿ ಗ್ರಾಮದ ಶಾಲಾ ಆವರಣದಲ್ಲಿ ಕ್ರಿಕೆಟ್‌ ಆಡುತ್ತಿದ್ದರು. ಈ ವೇಳೆ ಕ್ರಿಕೆಟ್‌ ಬಾಲ್‌ ಅಲ್ಲೇ ಕೂತಿದ್ದ ಬಾಲಕನ ಬಳಿ ಬಂದಿದೆ. ಬಾಲಕ ಬಾಲ್‌ ಅನ್ನು ತೆಗೆದುಕೊಂಡು ಅವರ ಬಳಿ ಎಸೆದಿದ್ದಾನೆ. ಬಾಲ್‌ ಮುಟ್ಟಿದವ ದಲಿತ ವ್ಯಕ್ತಿಯೆಂದು ಆಡುತ್ತಿದ್ದವರು ಆತನ ಬಳಿ ಬಂದು ಆತನಿಗೆ ಹೀಯಾಳಿಸಿ, ದಲಿತ ಸಮುದಾಯವನ್ನು ನಿಂದಿಸಿದ್ದಾರೆ. ಇದನ್ನು ನೋಡಿದ ಬಾಲಕನ ಚಿಕ್ಕಪ್ಪ ಧೀರಜ್ ಪರ್ಮಾರ್ ಮಧ್ಯ ಪ್ರವೇಶಿಸಿ ವಿಷಯವನ್ನು ತಣ್ಣಗೆ ಮಾಡಿದ್ದಾರೆ. ಆ ಬಳಿಕ ಸಮುದಾಯವನ್ನು ನಿಂದಿಸಿದ್ದಕ್ಕೆ ದೂರು ನೀಡಿದ್ದಾರೆ.

ಇದಾದ ಬಳಿಕ ಭಾನುವಾರ (ಜೂ.4 ರಂದು) ಸಂಜೆ 7 ಜನರ ಗುಂಪು ಧೀರಜ್ ಪರ್ಮಾರ್ ಹಾಗೂ ಆತನ ಸಹೋದರ ಕೀರ್ತಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಒಬ್ಬಾತ ಕೀರ್ತಿ ಅವರ ಹೆಬ್ಬೆರಳನ್ನು ಕತ್ತರಿಸಿದ್ದಾನೆ. ಇದರಿಂದ ಕೀರ್ತಿ ಗಂಭೀರ ಗಾಯಗೊಂಡಿದ್ದಾರೆ.

ಎಫ್‌ ಐಆರ್ ಸೆಕ್ಷನ್ 326, 506 ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ ಮತ್ತು ಎಸ್‌ಟಿ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸದ್ಯ ಆರೋಪಿಗಳ ಹುಡುಕಾಟ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!