ಆಯುರ್ವೇದದ ಪ್ರಕಾರ ಮೊಸರನ್ನು ತಿನ್ನಲು ರಾತ್ರಿಯ ಸಮಯ ಸೂಕ್ತವಲ್ಲ. ರಾತ್ರಿ ಮೊಸರನ್ನು ತಿಂದು ಮಲಗಿದರೆ ಕಫ ಸಮಸ್ಯೆ ಬಾಧಿಸುತ್ತದೆ. ಮೊಸರು ಸಿಹಿ ಹಾಗೂ ಹುಳಿ ಎರಡೂ ಗುಣಗಳನ್ನು ಹೊಂದಿದ ಕಾರಣ ಇದನ್ನು ರಾತ್ರಿ ಸೇವಿಸಬಾರದು.
ಮೂಗು ಕಟ್ಟುವುದು, ಕಫ ಸೇರುವುದು ಹಾಗೂ ಇನ್ನಿತರ ಸಮಸ್ಯೆಗಳು ಬಾಧಿಸುತ್ತವೆ. ಅಷ್ಟೇ ಅಲ್ಲದೆ ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆಯೂ ಮೊಸರು ಪರಿಣಾಮ ಬೀರುತ್ತದೆ. ಊಟದ ತಕ್ಷಣ ಮಲಗಿ ಬಿಡುವ ಅಭ್ಯಾಸ ಇರುವವರಂತೂ ತಿನ್ನುವುದು ಒಳ್ಳೆಯದಲ್ಲ.